Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿವಮೊಗ್ಗ.. ಚಿಕ್ಕಮಗಳೂರು ಸೇರಿದಂತೆ ಇಂದು ಹಲವೆಡೆ ಮಳೆ : ಹೇಗಿದೆ ಹವಮಾನ ವರದಿ..?

Facebook
Twitter
Telegram
WhatsApp

ಬೆಂಗಳೂರು: ಭೂಮಿಯ ಮೇಲಿನ ವಾತಾವರಣವಂತೂ ನಿರೀಕ್ಷೆಯನ್ನೇ ಮಾಡದ ರೀತಿ ಬದಲಾಗುತ್ತಿದೆ. ಈಗಾಗಲೇ ಹಿಂಗಾರು ಮಳೆ ಮುಗಿದಿದೆ. ಚಳಿಗಾಲ ಆರಂಭವಾಗಿದೆ. ಈ ಚಳಿಗಾಲದ ಸಮಯದಲ್ಲಿ ಬೆಳೆಗಳ ಕೊಯ್ಲಿನ ಕಡೆಗೆ ರೈತರು ಹೆಚ್ಚು ಗಮನ ನೀಡುತ್ತಾರೆ. ಆದರೆ ಈಗ ಮಳೆ ಬರುತ್ತಿರುವುದು ರೈತರಿಗೂ ಸಂಕಷ್ಟ ತಂದೊಡ್ಡಿದೆ.

ಇಂದಿನಿಂದ ರಾಜ್ಯದಲ್ಲಿ ಮಳೆಯಾಗಲಿದ್ದು, ನವೆಂಬರ್ 25ರವರೆಗೂ ಮಳೆ ಮುಂದುವರೆಯಲಿದೆ. ಅಲ್ಲಿ ಸ್ವಲ್ಪ ಗ್ಯಾಪ್ ಕೊಟ್ಟು ಡಿಸೆಂಬರ್ 3ರವರೆಗೂ ಮತ್ತೆ ಮಳೆಯಾಗಲಿದೆ. ಕೆಲವೊಂದು ಭಾಗದಲ್ಲಿ ಅದರಲ್ಲೂ ತುಮಕೂರು ಭಾಗದ ಜನ ರಾಗಿ ಬೆಳೆಯನ್ನೇ ಹೆಚ್ಚು ಬೆಳೆದಿದ್ದಾರೆ. ಹೊಲವೆಲ್ಲ ಒಣಗಿ ನಿಂತಿದೆ. ಹೀಗಿರುವಾಗ ಮಳೆ ಬಂದರೆ ರಾಗಿಯ ಕೊಯ್ಲು ಮಾಡುವುದೇಗೆ ಎಂಬ ಆತಂಕ ರೈತರದ್ದಾಗಿದೆ.

ಹವಮಾನ ಇಲಾಖೆ ಕೊಟ್ಟ ಮುನ್ಸೂಚನೆ ಪ್ರಕಾರ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಆರ್ಭಟ ಇರಲಿದೆ. ಕರಾವಳಿಯ ದಕ್ಷಿಣ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ‌. ಬೆಂಗಳೂರಿನಲ್ಲಿ ಈಗಾಗಲೇ ಮೋಡ ಕವಿದ ವಾತಾವರಣವಿದೆ. ಇನ್ನು ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣವೇ ಮುಂದುವರೆಯಲಿದೆ. ಜೊತೆಗೆ ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ಗರಿಷ್ಠ ತಾಪಮಾನವೂ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಳಿದಂತೆ ಇನ್ನೆರಡು ದಿನಗಳಲ್ಲಿ ರಾಜ್ಯದ ಹವಮಾನದಲ್ಲಿ ಮಹತ್ವದ ಬದಲಾವಣೆಗಳು ಇಲ್ಲ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ ಪ್ರಹ್ಲಾದ್ ಜೋಶಿ..!

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕರ್ನಾಟಕ ರಾಜ್ಯದ ಸಿಎಂ, ಡಿಸಿಎಂ ಕೂಡ ಜೋರು ಪ್ರಚಾರ ನಡೆಸಿದ್ದಾರೆ. ಮಹಾರಾಷ್ಟ್ರ ಚುನಾವಣೆಗೆ ಇನ್ನು ಉಳಿದಿರುವುದು ಎರಡು ದಿನಗಳು ಮಾತ್ರ. ಈ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕೆಪಿಟಿಸಿಎಲ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬಹುದು. ಒಟ್ಟು 2,975 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ. ಇನ್ನು ಎರಡು ದಿನದ ಒಳಗೆ

ಚಿತ್ರದುರ್ಗ – ಜೋಡಿಚಿಕ್ಕೇನಹಳ್ಳಿ ರೈಲ್ವೆ ಗೇಟ್ ಬಂದ್ : ರಸ್ತೆ ಮಾರ್ಗ ಬದಲಾವಣೆ

ಚಿತ್ರದುರ್ಗ. ನ.18: ಚಿತ್ರದುರ್ಗ-ಬಾಲೇನಹಳ್ಳಿ ರೈಲ್ವೆ ಹಳಿಯ ಲೆವಲ್ ಕ್ರಾಸಿಂಗ್ ಮತ್ತು ನವೀಕರಣ ಕಾರ್ಯದ ನಿಮಿತ್ತ ನ.19ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಿತ್ರದುರ್ಗ-ಜೋಡಿಚಿಕ್ಕೇನಹಳ್ಳಿ ರೈಲ್ವೆ ಗೇಟ್ ಮುಚ್ಚಲಾಗುತ್ತದೆ.   ರಸ್ತೆ ಸಂಚಾರಿಗಳ

error: Content is protected !!