ಹಿಂಗಾರು ಮಳೆ ಆರಂಭವಾಗಿದ್ದು, ಚಳಿ ಚಳಿ ಎನ್ನುತ್ತಿದ್ದ ವಾತಾವರಣದಲ್ಲಿ ಇದೀಗ ಮತ್ತೆ ಮಳೆರಾಯನ ಸ್ಪರ್ಶವಾಗುತ್ತಿದೆ. ಕಳೆದ ಎರಡು ದಿನದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ. ಬೆಂಗಳೂರು ಸೇರಿದಂತೆ ಇನ್ನು ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಮಧ್ಯಾಹ್ನವೇ ಮಳೆ ಸುರಿದಿದೆ.
ಆದ್ರೆ ತಮಿಳುನಾಡಿನಲ್ಲಿ ಮಳೆಯಿಂದ ಜನ ಸಮಸ್ಯೆಗೆ ಸಿಲುಕಿದ್ದಾರೆ. ಚೆನ್ನೈ ಮಹಾನಗರ ಅರ್ಧ ಮುಳುಗಡೆಯಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿದ್ದು, ಮೂರು ಸಾವು ಕೂಡ ಸಂಭವಿಸಿದೆ. ಈಗಾಗಲೇ ಶಾಲಾ-ಕಾಲೇಜಿಗೆ ರಜೆ ನೀಡಲಾಗಿದೆ. ಇನ್ನು ಮೂರ್ನಾಲ್ಕು ದಿನ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು 24-19, ರಾಮನಗರ 26-19, ಮಂಡ್ಯ 26-19, ಮೈಸೂರು 26-19, ಚಾಮರಾಜನಗರ 26-19, ಬೆಂಗಳೂರು ಗ್ರಾಮಾಂತರ 24-19, ಚಿಕ್ಕಬಳ್ಳಾಪುರ 22-17, ಕೋಲಾರ: 24-19, ಮಡಿಕೇರಿ: 24-17,. ಹಾಸನ: 26-18, ಶಿವಮೊಗ್ಗ: 29-19, ಚಿಕ್ಕಮಗಳೂರು: 26-18, ಮಂಗಳೂರು: 32-24, ಕಾರವಾರ: 32-24 ಉಡುಪಿ: 32-24, ಬೀದರ್: 29-18, ಕಲಬುರಗಿ: 31-20, ರಾಯಚೂರು: 29-21, ಯಾದಗಿರಿ: 31-21, ಬಾಗಲಕೋಟೆ: 32-21, ವಿಜಯಪುರ: 32-20, ತುಮಕೂರು: 25-19, ಚಿತ್ರದುರ್ಗ: 27-19, ಹಾವೇರಿ: 30-20, ದಾವಣಗೆರೆ: 28-20, ಗದಗ: 30-19, ಧಾರವಾಡ: 30-19, ಕೊಪ್ಪಳ: 29-21, ಬೆಳಗಾವಿ: 30-18 ಮತ್ತು ಬಳ್ಳಾರಿ: 29-21 ಹವಮಾನ ವರದಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ಸೆಲ್ಸಿಯಸ್ ಇದೆ.