ಆಗಸ್ಟ್ 24ರಿಂದ ಮಳೆ : ಹವಮಾನ ಇಲಾಖೆ ಮಾಹಿತಿ

1 Min Read

 

ಬೆಂಗಳೂರು: ಮಳೆ ಯಾವಾಗ ಬರುತ್ತೆ ಅಂತ ರೈತರು ಗಮನವಿಟ್ಟು ಕಾಯುತ್ತಿದ್ದಾರೆ. ಬೀಜ ಬಿತ್ತನೆ ಮಾಡಿದವರು ಈಗ ಮತ್ತೊಂದು ಸಲ ಉಳುಮೆ ಮಾಡಿಸುವಂತ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ. ಮಳೆ‌ ಈಗಲಾದರೂ ಸರಿಯಾದ ಸಮಯಕ್ಕೆ ಬಂದರೆ ಬೆಳೆ ಬೆಳೆಯಬಹುದಾದ ನಂಬಿಕೆ ಮೂಡಲಿದೆ. ಹವಮಾನ ಇಲಾಖೆ ಇತ್ತಿಚೆಗೆ ಮಳೆಯ ಬಗ್ಗೆ ಮುನ್ಸೂಚನೆ ನೀಡಿದೆ.

ಆಗಸ್ಟ್ 24ರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಏರಿಕೆಯಾಗಲಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವೆಡೆ ಜೋರು ಮಳೆಯಾಗಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಈ ತಿಂಗಳಾಂತ್ಯಕ್ಕೆ ಹೆಚ್ಚಿನ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ವರದಿ ನೀಡಿದೆ.

ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಲಿದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ‌ ಮಾಡಲಾಗಿದೆ. ಬೆಂಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲೂ ಮಳೆಯಾಗಲಿದೆಯಂತೆ. ಆದಷ್ಟು ಬೇಗ ಮಳೆಯಾದರೆ ಉತ್ತಮ. ಬೆಳೆಯ ಪೈರುಗಳು ಕೂಡ ಭೂಮಿಯ ಮೇಲೆ ಕಾಣಿಸಿಕೊಂಡಿಲ್ಲ.

ವಾಡಿಕೆಯಂತೆ ಮಳೆಯಾಗಿದ್ದರೆ, ಇಷ್ಟೊತ್ತಿಗೆ ಬೀಜ, ಮೊಳಕೆಯೊಡೆದು ಪೈರು ಜಗಮಗಿಸಬೇಕಿತ್ತು. ಆದರೆ ಈಗಿನ ಪರಿಸ್ಥಿತಿ ಹೇಗಿದೆ ಅಂದ್ರೆ ಬೀಜಗಳನ್ನು ಹಾಕಿ, ಉಳುಮೆಯನ್ನು ಮಾಡಿ, ಅದಾಗಲೇ ಒಂದಷ್ಟು ಹಣ ಸುರಿದ ರೈತ ಇನ್ನು ಭರವಸೆಯ ಆಶಾಕಿರಣದಲ್ಲಿಯೇ ಇದ್ದಾನೆ. ಮಳೆ ಬಂದರೆ ಈಗಾಲಾದರೂ ಬೆಳೆ ಬರುತ್ತೆ ಅನ್ನೋ ನಂಬಿಕೆ.

Share This Article
Leave a Comment

Leave a Reply

Your email address will not be published. Required fields are marked *