ಚಿತ್ರದುರ್ಗ, ತುಮಕೂರು ಸೇರಿದಂತೆ ಇಂದು ಬಾರೀ ಮಳೆಯ ಮುನ್ಸೂಚನೆ..!

ಮಳೆಗಾಲ ಆರಂಭವಾಗಿದೆ. ರಾಜ್ಯಾದ್ಯಂತ ಜೋರು ಮಳೆಯಾಗುತ್ತಿದೆ. ಇಂದು ಕೂಡ ಜೋರು ಮಳೆಯ ಮುನ್ಸೂಚನೆ ನೀಡಿದೆ ಹವಮಾನ ಇಲಾಖೆ. ಸಂಜೆ ಒಳಗೆ ಭಾರೀ ಮಳೆಯಾಗಲಿದೆ ಎಂದಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುರದಗ, ತುಮಕೂರು ಸೇರಿದಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಕಡೆಯಲ್ಲೆಲ್ಲಾ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಗಾಳಿ ಕೂಡ ವೇಗವಾಗಿ ಬೀಸುವ ಮುನ್ಸೂಚನೆ ನೀಡಿದೆ. ಗಂಟೆಗೆ 30-40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಜೋರು ಗಾಳಿ ಬೀಸಿದಾಗ ಹೊರಗೆ ಹೋದವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲೂ ವಾಹನ ಸವಾರರು ಎಚ್ಚರದಿಂದ ಓಡಾಡಲು ಹವಮಾನ ಇಲಾಖರ ಸೂಚನೆ ನೀಡಿದೆ.

ಈ ವರ್ಷ ಮುಂಗಾರು ಮಳೆ ಆರಂಭದಲ್ಲಿಯೇ ಉತ್ತಮವಾಗಿ ಬರುವ ಸೂಚನೆ ನೀಡಿದೆ. ಹೀಗಾಗಿ ರೈತರಲ್ಲಿ ಖುಷಿ ನೀಡಿದೆ. ಸದ್ಯಕ್ಕೆ ಭೂಮಿಗೆ ನೇಗಿಲು ಹಾಕುವ ಸಮಯವಿದು. ಭೂಮಿ ಉತ್ತಲು ಈಗಾಗಲೇ ರೈತರು ಎಲ್ಲಾ ತಯಾರಿ ನಡೆಸಿದ್ದಾರೆಮ ಕಳೆದ ವರ್ಷ ಮಳೆ ಇಲ್ಲ ಭೂಮಿ ಒಣಗಿ ಹೋಗುತ್ತು. ಅದೆಷ್ಟೋ ಬೆಳೆ ನಾಶವಾಗಿತ್ತು. ಅಡಕೆ, ತೆಂಗು ಬೆಳೆಗಾರರಂತು ನೊಂದುಕೊಂಡಿದ್ದರು. ಮರಗಳು ಒಣಗುತ್ತಿದ್ದನ್ನು ನೋಡುವುದಕ್ಕೆ ಆಗುತ್ತಿರಲಿಲ್ಲ. ಈಗ ಭೂಮಿ ತೇವವಾಗಿದೆ, ರೈತರ ಮೊಗದಲ್ಲಿ ಸಂತಸ ತಂದಿದೆ. ಮರ ಗಿಡಗಳು ಸಹ ಅಚ್ಚ ಹಸಿರಿನಿಂದ ಕೂಡಿದೆ.

ರಾಜ್ಯದ ಹಲವು ಜಿಲ್ಲೆಯಲ್ಲಿ ಮಳೆ ಜಾಸ್ತಿಯಾಗಿರುವ ಕಾರಣ ಕೆಲವೊಂದು ಕಡೆ ಬೆಳೆ ಸರಿಯಾಗಿ ಕೈಗೆ ಬರುತ್ತಿಲ್ಲ. ಹೀಗಾಗಿ ತರಕಾರಿ, ಸೊಪ್ಪಿನ ಬೆಲೆಯೆಲ್ಲಾ ಗಗನಕ್ಕೇರಿದೆ‌. ಮಳೆ ಒಂದು ಹಂತಕ್ಕೆ ಬಂದ ಮೇಲೆ ತರಕಾರಿ, ಸೊಪ್ಪಿನ ಬೆಳೆ ಇಳಿಯಬಹುದು. ಪ್ರತಿ ವರ್ಷ ಕೂಡ ಈ ರೀತಿಯ ಬೆಲೆ ಏರಿಕೆಯನ್ನು ಜನ ಅನುಭವಿಸುತ್ತಲೆ ಇರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *