ಬೆಂಗಳೂರು: ಬೆಂಬಿಡದೆ ಸುರಿಯುತ್ತಿದ್ದ ಮಳೆರಾಯ ಕಳೆದ ಎರಡು ದಿನದಿಂದ ಬಿಡುವು ಕೊಟ್ಟಿದ್ದಾನೆ. ಆದರೆ ನಾಳೆ ಮತ್ತೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ತೀರ ಭಾಗದಲ್ಲಿ ಜೋರು ಮಳೆಯಾಗುವ ಸಾಧ್ಯತೆಯೇ ಹೆಚ್ಚಿದೆ ಎಂದು ತಿಳಿಸಿದೆ.
ಕಾಸರಗೋಡು, ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲೂ ಸ್ವಲ್ಪ ಮಳೆಯಾಗಲಿದೆ. ಕೊಡಗು ಹಾಸನ ಭಾಗದಲ್ಲಿ ಒಂದೆರಡು ಕಡೆ ಸಾಮಾನ್ಯ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಭಾಗದಲ್ಲಿ ತುಂತುರು ಮಳೆಯಾಗಲಿದೆ. ಕರಾವಳಿಗೆ ಹೊಂದಿಕೊಂಡಂತ ಪ್ರದೇಶದಲ್ಲಿ ಜೋರು ಮಳೆಯಾಗಲಿದೆ. ಸದ್ಯ ರೈತರೆಲ್ಲ ಉತ್ತಮವಾದ ಮಳೆ ಕಂಡು ಹರ್ಷಗೊಂಡಿದ್ದಾರೆ. ಜಮೀನು ಉಳಿಮೆಯನ್ನು ಮಾಡಿ, ಬೀಜ ಬಿತ್ತನೆಯತ್ತ ಗಮನ ಹರಿಸಿದ್ದಾರೆ. ಈಗ ಮಳೆ ಕೊಂಚ ವಿಶ್ರಾಂತಿ ನೀಡಿರುವುದು ವ್ಯವಸಾಯಕ್ಕೂ ಅನುಕೂಲಕರವಾಗಿದೆ.