ಉತ್ತರ ಕನ್ನಡ: ಆರಂಭದಲ್ಲಿಯೆ ಮುಂಗಾರು ಅಧಿಕವಾಗಿ ಮಳೆ ತಂದಿದೆ. ಈ ವರ್ಷ ನಿರೀಕ್ಷೆಗೂ ಮೀರಿಯೇ ಮಳೆಯಾಗುವ ಎಲ್ಲಾ ಸೂಚನೆಗಳು ಸಿಕ್ಕಿದೆ. ಇದೀಗ ಉತ್ತರ ಕನ್ನಡ ಭಾಗದಲ್ಲಿ ಜುಲೈ ಏಳರ ತನಕ ಬಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿದ್ದ ಮಳೆ ಇಂದು ಕೊಂಚ ವಿರಾಮ ನೀಡಿದೆ. ಬಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಸುತ್ತಮುತ್ತ ಬೆಟ್ಟಗಳು ಕುಸಿಯ ತೊಡಗಿದೆ.
ಈಗಾಗಲೇ ದೇಶದಾದ್ಯಂತ ಮುಂಗಾರು ಜೋರಾಗಿದ್ದು, ಹಲವು ರಾಜ್ಯಗಳಲ್ಲಜ ಮಳೆತ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲೂ ಮುಂಗಾರು ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.