ಚಿತ್ರದುರ್ಗ, (ಜೂನ್ 06) : ಜೂನ್ 06ರಂದು ಜಿಲ್ಲೆಯಲ್ಲಿ ಬಿದ್ದ ಮಳೆ ವಿವರದನ್ವಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 92.4 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನಲ್ಲಿ 50.2 ಮಿ.ಮೀ, ಹಿರಿಯೂರು ತಾಲ್ಲೂಕಿನಲ್ಲಿ 46.4 ಮಿ.ಮೀ, ಚಳ್ಳಕೆರೆಯಲ್ಲಿ 23.8 ಮಿ.ಮೀ,
ಚಿತ್ರದುರ್ಗ ತಾಲ್ಲೂಕಿನಲ್ಲಿ 21.6 ಮಿ.ಮೀ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ 33.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕಿನಲ್ಲಿ 18.9 ಮಿ.ಮೀ ಮಳೆಯಾಗಿದೆ.
ಹೊಸದುರ್ಗದಲ್ಲಿ 86.2 ಮಿ.ಮೀ, ಬಾಗೂರು 12 ಮಿ.ಮೀ, ಮತ್ತೋಡು 24 ಮಿ.ಮೀ, ಶ್ರೀರಾಂಪುರ 40.2 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ -1ರಲ್ಲಿ 21 ಮಿ.ಮೀ, ಚಿತ್ರದುರ್ಗ -2ರಲ್ಲಿ 30.3 ಮಿ.ಮೀ, ಹಿರೇಗುಂಟನೂರು 2.1 ಮಿ.ಮೀ, ಐನಳ್ಳಿ 36.8 ಮಿ.ಮೀ, ಭರಮಸಾಗರ 7.2 ಮಿ.ಮೀ, ಸಿರಿಗೆರೆ 9.6 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 83 ಮಿ.ಮೀ, ಬಬ್ಬೂರಿನಲ್ಲಿ 85.6 ಮಿ.ಮೀ, ಇಕ್ಕನೂರಿನಲ್ಲಿ 52.4 ಮಿ,ಮೀ. ಈಶ್ವರಗೆರೆ 40.2 ಮಿ.ಮೀ, ಸುಗೂರು 17.3 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 54.4 ಮಿ.ಮೀ, ದೇವಸಮುದ್ರ 42.4 ಮಿ.ಮೀ, ರಾಂಪುರ 60.2 ಮಿ.ಮೀ, ರಾಯಾಪುರ 30 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 78 ಮಿ.ಮೀ, ನಾಯಕನಹಟ್ಟಿ 27.4ಮಿ.ಮೀ, ಡಿ.ಮರಿಕುಂಟೆ 5.2 ಮಿ.ಮೀ, ಪರಶುರಾಂಪುರ 8.2ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 14.6 ಮಿ.ಮೀ, ರಾಮಗಿರಿ 45.4 ಮಿ.ಮೀ, ಚಿಕ್ಕಜಾಜೂರು 24.2, ಹೆಚ್.ಡಿ.ಪುರ 26 ಮಿ.ಮೀ, ತಾಳ್ಯ 3 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.