- ಚಿತ್ರದುರ್ಗ,(ಆಗಸ್ಟ್.03) : ಜಿಲ್ಲೆಯಲ್ಲಿ ಆಗಸ್ಟ್ 02 ರಂದು ಸುರಿದ ಮಳೆ ವಿವರದನ್ವಯ ಹಿರಿಯೂರು ತಾಲ್ಲೂಕಿನ ಈಶ್ವರಗೆರೆಯಲ್ಲಿ 20 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಉಳಿದಂತೆ ಹಿರಿಯೂರಿನಲ್ಲಿ 7 ಮಿ.ಮೀ, ಇಕ್ಕನೂರಿನಲ್ಲಿ 8.4 ಮಿ.ಮೀ, ಬಬ್ಬೂರಿನಲ್ಲಿ 18 ಮಿ.ಮೀ, ಸೂಗೂರು 17.4 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 3.6 ಮಿ.ಮೀ, ಬಾಗೂರು 2.3 ಮಿ.ಮೀ, ಮತ್ತೋಡು 6 ಮಿ.ಮೀ, ಮಾಡದಕೆರೆ 6 ಮಿ.ಮೀ, ಶ್ರೀರಾಂಪುರ 5 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 2 ಮಿ.ಮೀ, ಚಿತ್ರದುರ್ಗ -2ರಲ್ಲಿ 2 ಮಿ.ಮೀ, ಸಿರಿಗೆರೆ 1.2 ಮಿ.ಮೀ, ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 4 ಮಿ.ಮೀ, ಪರಶುರಾಂಪುರ 17.6 ಮಿ.ಮೀ, ಡಿ.ಮರಿಕುಂಟೆ 10.2 ಮಿ.ಮೀ, ತಳುಕು 0.4 ಮಿ.ಮೀ ಮಳೆಯಾಗಿದೆ.
ಮಂಗಳವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 20 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಚಿತ್ರದುರ್ಗ 03 ಮನೆಗಳು, ಚಳ್ಳಕೆರೆ 01, ಹಿರಿಯೂರು 03, ಹೊಸದುರ್ಗ 05, ಹೊಳಲ್ಕೆರೆ 4, ಮೊಳಕಾಲ್ಮೂರು 4 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಕೃಷಿ ಬೆಳೆಗೆ ಸಂಬಂಧಿಸಿದಂತೆ 13.66 ಹಾಗೂ ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ 4.04 ಹೆಕ್ಟೇರ್ ಹಾನಿಗೊಳಗಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.