ಬೆಂಗಳೂರು: ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮುಂದಿನ ಏಳು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ವರದಿ ನೀಡಿದೆ. ಅಷ್ಟೇ ಅಲ್ಲ ಆಗಸ್ಟ್ 14 ರಿಂದ ಮಳೆಯ ಪ್ರಮಾಣ ಜೋರಾಗಲಿದೆ ಎಂಬ ಮಾಹಿತಿಯನ್ನು ನೀಡಿದೆ. ನಾಳೆ ಅಂದ್ರೆ ಭಾನುವಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಶಾಧಾರಣ ಮಳೆಯಾಗಲಿದೆ.
ಉಳಿದಂತೆ ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಾಳಿಯ ವೇಗ ಕೂಡ ಕೆಲವೊಂದು ಭಾಗದಲ್ಲಿ ಹೆಚ್ಚಾಗಿದ್ದು,ಇನ್ನು ಕೆಲವೊಂದು ಭಾಗದಲ್ಲಿ ಸಾಧಾರಣವಾಗಿರುತ್ತದೆ. ಇನ್ನು ಕಳೆದ ಕೆಲವೊಂದಿಷ್ಟು ದಿನಗಳ ಹಿಂದಷ್ಟೇ ಹವಮಾನ ಇಲಾಖೆ ಶಾಕಿಂಗ್ ನ್ಯೂಸ್ ನೀಡಿದೆ. ಈ ಆಗಸ್ಟ್ ತಿಂಗಳಲ್ಲಿ ಮಳೆ ಅಷ್ಟಕ್ಕೆ ಅಷ್ಟೇ. 50% ಬರಲಿದೆ ಎಂದು ತಿಳಿಸಿದೆ. ಇದನ್ನು ಕೇಳಿದ ರೈತರು ಅಕ್ಷರಶಃ ಕಂಗಾಲಾಗಿದ್ದರು. ಸದ್ಯ ಮಳೆರಾಯ ಕೃಪೆ ತೋರಿದ್ದು, ಜಮೀನುಗಳಲ್ಲಿ ಕೆಲಸ ಮಾಡುವುದಕ್ಕೆ ರೈತರು ಖುಷಿಯಾಗಿ ಹೊರಟಿದ್ದಾರೆ. ಅದರಲ್ಲೂ ರಾಗಿ ಸೇರಿದಂತೆ ಹಲವು ಬೆಳೆಗಳಿಗೆ ಈಗಷ್ಟೇ ಬಿತ್ತನೆ ಮಾಡಿದ್ದು, ಮಳೆರಾಯನ ದರ್ಶನ ಖುಷಿ ನೀಡಿದೆ. ಕಳೆದ ಮೂರು ದಿನದಿಂದ ಮಳೆ ಎಲ್ಲಾ ಕಡೆ ಸುರಿಯುತ್ತಿದೆ.






