ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅಷ್ಟೇ ಅಲ್ಲ ರೈತರ ಬೆಳೆಯೆಲ್ಲಾ ಜಮೀನಿನಲ್ಲಿ ಮಲಗಿಕೊಂಡು ಬಿಟ್ಟಿದೆ. ಇದರಿಂದ ರೈತರೆಲಾ ಕಂಗಾಲಾಗಿದ್ದಾರೆ. ಈ ಬಾರಿ ಬೆಳೆ ಕೈ ಸೇರೋದೆ ಡೌಟು ಅಂತಿದ್ದಾರೆ. ಆದ್ರೆ ಈ ಮಳೆ ಇಷ್ಟಕ್ಕೆ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ.
ಚೆನ್ನೈ ಹವಾಮಾನ ಪ್ರಾದೇಶಿಕ ಕೇಂದ್ರ ಕೊಟ್ಟಿರುವ ಸೂಚನೆ ಪ್ರಕಾರ ತಮಿಳುನಾಡಿನಾದ್ಯಂತ ಇನ್ನು ಮಳೆ ಮುಂದುವರೆದಿದೆ. ಹೀಗಾಗಿ ಅಕ್ಕಪಕ್ಕದ ರಾಜ್ಯಕ್ಕೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮುಂದಜನ 48 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳಿಂದ ಕನ್ಯಾಕುಮಾರಿ, ಕಾವೇರಿ ನದಿ ಮುಖಜ ಭೂಮಿ ಮತ್ತು ಚೆನ್ನೈ ಸೇರಿದಂತೆ ತಮಿಳುನಾಡಿನ ಉತ್ತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ.