ಹಿರಿಯೂರು : ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ದಾಳಿ

1 Min Read

ಸುದ್ದಿಒನ್, ಹಿರಿಯೂರು : ಮಹಿಳೆಗೆ ಉದ್ಯೋಗ ಕೊಡಿಸಲಾಗುವುದೆಂದು ಹೇಳಿ ಕರೆಸಿಕೊಂಡು ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿ, ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ನಗರ ಪೊಲೀಸರು ದಾಳಿ ನಡೆಸಿ, ಮಹಿಳೆಯನ್ನು ರಕ್ಷಿಸಿದ್ದಾರೆ.

ನಗರದ ಹುಳಿಯಾರು ರಸ್ತೆಯಲ್ಲಿರುವ ಸ್ಟಾರ್ ಲಾಡ್ಜ್ ನಲ್ಲಿ ಮಂಡ್ಯ ಮೂಲದ ಮಹಿಳೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು.ಅನೈತಿಕ ಚಟುವಟಿಕೆಯ ಮಾಹಿತಿ ಮೇರೆಗೆ ನಗರದ ಹುಳಿಯಾರು ರಸ್ತೆಯಲ್ಲಿರುವ ಸ್ಟಾರ್ ಲಾಡ್ಜ್ ಮೇಲೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅನೈತಿಕ ಕೆಲಸ ಮಾಡಿಸುತ್ತಿದ್ದ ಲಾಡ್ಜ್ ನ ಕ್ಯಾಷಿಯರ್ ಮತ್ತು ಮತ್ತಿಬ್ಬರನ್ನು ವಶಕ್ಕೆ ಪಡೆದು ಅವರಿಂದ ಮೂರು ಸಾವಿರ ನಗದು ಹಾಗೂ ಅನೈತಿಕ ಕೆಲಸಕ್ಕೆ ಬಳಸಿದ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks