ರಾಯಚೂರು: ಕಳೆದ 15-20ರಿಂದೀಚೆಗೆ ರಾಯಚೂರಿನಲ್ಲಿ ಏಳು ಜನ ಬಲಿಯಾಗಿದ್ದಾರೆ. ಅದು ನಗರಸಭೆ ಬಿಟ್ಟ ಕಲುಷಿತ ನೀರಿನಿಂದಾಗಿ. ನಗರಸಭೆ ವ್ಯಾಪ್ತಿಯಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಆಸ್ಪತ್ರೆ ಸೇರಿದ್ದರು. ಇದೀಗ ಅದರ ಪರಿಣಾಮವಾಗಿ ಇಂದು 40 ವರ್ಷದ ಶಮೀಮ್ ಬೇಗಂ ಕೊನೆಯುಸಿರೆಳೆದಿದ್ದಾರೆ. ವಾರ್ಡ್ ನಂಬರ್ 14ರಲ್ಲಿ ಮೃತ ಶಮೀಮ್ ವಾಸವಾಗಿದ್ದರು.
ಶಮೀಮ್ ಕಲುಷಿತ ನೀರು ಕುಡಿದ ಪರುಣಾಮ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮೇ 29ರಂದೇ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ವಾಂತಿ, ಬೇಧಿ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈಗಾಗಲೇ ಈ ಘಟನೆ ಸಂಬಂಧ ಆರು ಮಂದಿ ವಾಂತಿ, ಬೇಧಿ, ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ್ದರು.
ಈ ಕಲುಷಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಈಗಾಗಲೇವಪೌರಾಡಳಿತ ನಿರ್ದೇಶನಾಲಯದ ಮಿರ್ದೇಶಕಿ ಅರ್ಚನಾ ತನಿಖಾ ತಂಡ ನೇಮಿಸಿದ್ದಾರೆ. ನೀರಿನ ಶುದ್ಧೀಕರಣ ಮತ್ತು ಸರಬರಾಜು ಮಾಡುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆ ನಿರ್ಲಕ್ಷ್ಯಕ್ಕೆ ಏಳು ಮಂದಿ ಬಲಿಯಾಗಿದ್ದಾರೆ. ಇನ್ನು ನೂರಾರು ಮಂದಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ನರಳುತ್ತಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.