ನವದೆಹಲಿ: ಇಂದು ಸಂಸತ್ ಕಲಾಪ ಆರಂಭವಾಗುತ್ತಲೇ ರಾಹುಲ್ ಗಾಂಧಿ ಹೇಳಿಕೆಯನ್ನು ತೆಗೆದುಕೊಂಡ ಬಿಜೆಪಿ ನಾಯಕರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ರು. ಎರಡನೇ ಅವಧಿಯ ಬಜೆಟ್ ಅಧಿವೇಶನ ಈ ಗದ್ದಲದ ಗೂಡಾಗಿತ್ತು. ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಲಾಪ ಆರಂಭಕ್ಕೆ ಬಿಜೆಪಿ ನಾಯಕರು ಬಿಡಲೇ ಇಲ್ಲ. ಈ ಗದ್ದಲವಿದ್ದ ಕಾರಣ ಮಧ್ಯಾಹ್ನ ಊಟವಾದ ಮೇಲೆ ಕಲಾಪವನ್ಮು ನಿಗದಿ ಮಾಡಲಾಗಿತ್ತು. ಮಧ್ಯಾಹ್ನದ ಬಳಿಕವೂ ಮತ್ತೆ ಗದ್ದಲವೆದ್ದ ಕಾರಣ, ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ರಾಹುಲ್ ಗಾಂಧಿ ಲಂಡನ್ ನಲ್ಲಿ ನೀಡಿದ ಹೇಳಿಕೆ ಪ್ರಸ್ತಾಪಿಸಿದ ಬಿಜೆಪಿಗೆ ಕಾಂಗ್ರೆಸ್ ನಾಯಕರು, ಅದಾನಿ ಗ್ರೂಪ್ ಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹಿಂಡನ್ ಬರ್ಗ್ ವರದಿ ಆಧರಿಸಿ ಸಮಿತಿ ರಚಿಸಬೇಕು. ಗ್ಯಾದ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿಪಕ್ಷ ನಾಯಕರ ಮೇಲೆ ತನಿಖಾ ಸಂಸ್ಥೆಗಳ ದಾಳಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದರು. ಈ ಎಲ್ಲಾ ಗದ್ದಲದಿಂದಾಗಿ ಕಲಾಪ ಮುಂದೂಡಿಕೆಯಾಗಿದೆ.