ಸಿಎಂ ಹಾಗೂ ಡಿಸಿಎಂ ಜೊತೆಗೆ ರಾಹುಲ್ ಗಾಂಧಿ ಸಭೆ : ಏನಂದ್ರು ಪರಮೇಶ್ವರ್..?

1 Min Read

ಬೆಂಗಳೂರು: ತಮಿಳುನಾಡಿಗೆ ಹೋಗುವಾಗ ದಾರಿ‌ ಮಧ್ಯೆ ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರು ಇಳಿದಿದ್ದರು. ಸಿಎಂ ಹಾಗೂ ಡಿಸಿಎಂ ಗ್ಯಾಪ್ ನಲ್ಲಿ ಭೇಟಿಯಾಗಿ ಮಾತು ಕಥೆಯನ್‌ ನಡೆಸಿದ್ದಾರೆ. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ಮತ್ತು ಅಧ್ಯಕ್ಷರು ಮಾತನ್ನಾಡಿದ್ದು ಅವರೇ. ಅವರೇ ಈ ಬಗ್ಗೆ ಹೇಳಬೇಕು. ನೀವೂ ನಮ್ಮನ್ನ ಕೇಳಿದರೆ ಹೇಗೆ ಹೇಳೋದು ಎಂದು ಹೇಳುತ್ತಲೇ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಲ್ಲಿ ಚರ್ಚೆ ಏನು ಮಾಡಿದಂತೆ ಕಾಣಿಸಲಿಲ್ಲ. ಉಭಯ ಕುಶಲೋಪರಿ ಇದ್ದಂತೆ ಇತ್ತು. ಆ ಬಗ್ಗೆ ನಾನೇನು ಹೇಳುವುದಕ್ಕೆ ಆಗಲ್ಲ ಎಂದಿದ್ದಾರೆ.

ಹೈಕಮಾಂಡ್ ಒಂದು ಕ್ಲಾರಿಟಿ ಕೊಡಲಿ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನ ಎಲ್ಲರು ಬಯಸ್ತಾ ಇದ್ದಾರೆ. ರಾಜಣ್ಣ ಅವರು ಹೇಳುವುದು ಒಂದು ಅರ್ಥದಲ್ಲಿ ಸರಿ ಇದೆ. ಈ ಗೊಂದಲ ಇರಬಾರದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ರಾಜಣ್ಣ ಅವರು ಓಪನ್ ಆಗಿ ಹೇಳಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬಳ್ಳಾರಿ ಕೇಸಲ್ಲಿ ಭರತ್ ರೆಡ್ಡಿ ಅರೆಸ್ಟ್ ಆಗದೆ ಇರುವುದಕ್ಕೆ ಬಿಜೆಪಿ ಗರಂ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತನಿಖೆ ಮಾಡ್ತಾ ಇದ್ದಾರೆ. ದಿನನಿತ್ಯ ವಿರೋಧ ಪಕ್ಷದವರನ್ನ ಕೇಳಿಕೊಂಡು, ಕಾಂಗ್ರೆಸ್ ನವರನ್ನ ಕೇಳಿಕೊಂಡು ಮಾಡಲ್ಲ ಪೊಲೀಸವರು. ನಿರ್ದಿಷ್ಟವಾದಂತ ತನಿಖೆ ಮಾಡೋದಕ್ಕೆ ಹೇಳಿರ್ತಾರೆ ಅವರು ಮಾಡ್ತಾರೆ. ಯಾರನ್ನ ಅರೆಸ್ಟ್ ಮಾಡಬೇಕು, ಯಾವಾಗ ಮಾಡಬೇಕು ಎಂಬುದು ಪೊಲೀಸರಿಗೆ ಗೊತ್ತಿದೆ ಎಂದಿದ್ದಾರೆ.

Share This Article
Enable Notifications OK No thanks