ನವದೆಹಲಿ: ಮೋದಿ ಎಂಬ ಸರ್ ನೇಮ್ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾಮನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ಇದರ ಪರಿಣಾಮ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು, ಎರಡು ವರ್ಷ ಜೈಲು ಶಿಕ್ಷೆಗೂ ಗುರಿಯಾಗಿದ್ದರು. ಈ ಸಂಬಂಧ ಇಂದು ಮತ್ತೊಂದು ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಅನರ್ಹತೆಯನ್ನು ತೆರವುಗೊಳಿಸುವ ಸಾಧ್ಯತೆಯೂ ಇದೆ.
ಅನರ್ಹತೆ ಹಿಂಪಡೆಯದೆ ಇದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಹೀಗಾಗಿ ಲೋಕಸಭಾ ಸದಸ್ಯತ್ವ ಸ್ಥಾನದ ಅನರ್ಹತೆಯನ್ನು ಹಿಂಪಡೆಯಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಸ್ಪೀಕರ್ ಓಂ ಬಿರ್ಲಾ ಸಹಿ ಮಾಡುವುದೊಂದೆ ಬಾಕಿ ಇದೆ. ಸಹಿಯಾದರೆ ಇಂದೇ ಅನರ್ಹತೆಯಿಂದ ಮುಕ್ತಿ ಪಡೆಯಲಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ರಾಹುಲ್ ಗಾಂಧಿ ವಿಚಾರವಾಗಿ ವಿಪಕ್ಷಗಳು ಕೂಡ ಒತ್ತಡ ಹಾಕುತ್ತಿವೆ. ಅರ್ಹತೆಯನ್ನು ವಾಪಾಸ್ ಪಡೆಯಬೇಕು ಎಂಬುದಾಗಿ. ಹೀಗಾಗಿ ಎಲ್ಲರ ಚಿತ್ತ ಸ್ಪೀಕರ್ ಸಹಿಯತ್ತ ನೆಟ್ಟಿದೆ. ಇನ್ನು ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದೆ. ಈ ಬಾರಿ ಪ್ರಧಾನಿ ಮೋದಿಯವರನ್ನು ಸೋಲಿಸಲೇಬೇಕೆಂದು ಈಗಾಗಲೇ ವಿಪಕ್ಷಗಳೆಲ್ಲಾ ಒಂದಾಗಿವೆ. 2024 ರ ಲೊಕಸಭಾ ಚುನಾವಣೆ ಹೈವೋಲ್ಟೇಜ್ ನಲ್ಲಿ ನಡೆಯುವುದರಲ್ಲಿ ನೋ ಡೌಟ್.