ವಿದ್ಯುತ್ ಸಮಸ್ಯೆ, ಹಣದುಬ್ಬರದ ಮಾತಾಡಲು ಸಮಯವಿಲ್ಲ, ಆದರೆ ರಾಹುಲ್ ಗಾಂಧಿ ಬಗ್ಗೆ ಮಾತಾಡಲು ಸಮಯವಿದೆ : ವೈರಲ್ ವಿಡಿಯೋಗೆ ಉತ್ತರ

ನವದೆಹಲಿ: ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನಾನು ಮುಂದು ತಾ ಮುಂದು ಬಿಜೆಪಿ ನಾಯಕರು ಕುಟುಕುತಿದ್ದಾರೆ. ಇದೇ ವಿಚಾರಕ್ಕೆ ಕಾಂಗ್ರೆಸ್ ಕೂಡ ಸುಮ್ಮನೆ ಕೂತಿಲ್ಲ. ಬದಲಿಗೆ ಮತ್ತೆ ತಿರುಗೇಟು ನೀಡಿದೆ.

ಮೊದಲಿಗೆ ಬಿಜೆಪಿ ನಾಯಕ ಅಮಿತ್ ಮಾಳವಿಯ ಈ ವಿಡಿಯೋ ಹಂಚಿಕೊಂಡು, ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ ಪಾರ್ಟಿಯಲ್ಲಿದ್ದಾರೆ. ಇವರು ಮುಂದಿನ ದಿನಗಳಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಟೀಕಿಸಿದ್ದರು. ಬಿಜೆಪಿ ನಾಯಕರ ಟೀಕೆಗಳಿಗೆ ಉತ್ತರಿಸಿರುವ ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್, ರಾಹುಲ್ ಗಾಂಧಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದರೆ ಸಂಘಿಗಳಿಗೆ ಯಾಕೆ ಭಯ. ಮದುವೆ ಆರತಕ್ಷತೆಯಲ್ಲಿ ಭಾಗವಹಿಸಿದರೆ ತಪ್ಪೇನು..? ಸಂಘಿಗಳು ಯಾಕೆ ಸುಳ್ಳನ್ನು ಹಬ್ಬಿಸುತ್ತಾರೆ ಎಂದಿದ್ದಾರೆ.

ಸದ್ಯ ರಾಹುಲ್ ಗಾಂಧಿ ವೈಯಕ್ತಿಕ ಭೇಟಿಯಲ್ಲಿದ್ದಾರೆ. ಬಿಜೆಪಿಯವರು ವಿದ್ಯುತ್ ಸಮಸ್ಯೆ, ಹಣದುಬ್ಬರ ಏರಿಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಬಿಟ್ಟು ರಾಹುಲ್ ಗಾಂಧಿ ಹಿಂದೆ ಬಿದ್ದಿದ್ದಾರೆ. ಬೇರೆಯದ್ದಕ್ಕೆ ಸಮಯವಿಲ್ಲ, ಆದರೆ ರಾಹುಲ್ ಗಾಂಧಿ ಬಗ್ಗೆ ಮಾತನಾಡಲು ಸಮಯವಿದೆ ಎಂದು ಕುಟುಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *