ಚಿಕ್ಕಮಗಳೂರು: ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳಿಂದ ಇಡಿ ವಿಚಾತಣೆ ನಡೆಸುತ್ತಿದೆ. ಈ ಹಿನ್ನೆಲೆ ರಾಜ್ಯ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಜೋರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಮಾತನಾಡಿರುವ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ಅದೊಂದು ಪ್ರಕ್ರಿಯೆ ಇದೆಯಲ್ಲ ಅದನ್ನು ಸಾಂವಿಧಾನಿಕವಾಗಿ ಎಲ್ಲರಿಗೂ ಅನ್ವಯಿಸುತ್ತದೆ. ಒಂದು ವೇಳೆ ನಾನು ತಪ್ಪು ಮಾಡಿದರು ಅದರಲ್ಲಿ ನನ್ನನ್ನು ಚೆಕ್ ಮಾಡ್ತಾರೆ ಎಂದಿದ್ದಾರೆ.
ಅದರಲ್ಲಿ ಪ್ರಚಾರ ತೆಗೆದುಕೊಳ್ಳುವುದು, ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ಕೊಡುವುದಲ್ಲ. ಇದು ವಾಸ್ತವ. ಸರಿ ಎನಿಸಿದರೆ ಸರಿ ಎನ್ನುತ್ತಾರೆ, ಇಲ್ಕವಾದರೆ ಇಲ್ಕ ಅಂತಾರೆ. ವಿಷಯ ಯಾರಿಗಾದರೂ ಇದ್ದರೆ ವಿಷಯಾಧಾರಿತ ಹೋರಾಟ ಮಾಡುತ್ತಾರೆ. ವಿಷಯ ಇಲ್ಲದೆ ಇದ್ದರೆ ಇಂಥ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ನಡೆದಿದೆ ಎಂದೊದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರಾಹುಲ್ ಗಾಂಧಿಯನ್ನು ವಿಚಾರಣೆ ನಡೆಸಿದ್ದಾರೆ. ಇನ್ನು ಸೋನಿಯಾ ಗಾಂಧಿ ಅವರಿಗೆ ಕೊರೊನಾ ಇರುವ ಕಾರಣ ಅವರನ್ನು ತಡವಾಗಿ ವಿಚಾರಣೆ ನಡೆಸಲಿದೆ. ಇಬ್ಬರಿಗೂ ಒಂದೇ ಸಮಯಕ್ಕೆ ಸಮನ್ಸ್ ಜಾರಿ ಮಾಡಿತ್ತು.