ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಅನರ್ಹತೆ ತೆರವಾಗಿದೆ. ಹೀಗಾಗಿ ಇಂದು ಲೋಕಸಭೆಗೆ ಹಾಜರಾಗಿದ್ದರು. ಆದ್ರೆ ಮೊದಲ ದಿನವೇ ರಾಹುಲ್ ಗಾಂಧಿ ಮೇಲೆ ಆರೋಪ ಬಂದಿದೆ. ಫ್ಲೈಯಿಂಗ್ ಕಿಸ್ ಕೊಟ್ರು ಅಂತ ಕೇಂದ್ರ ಸಚಿವೆ ಸ್ಪ್ಮತಿ ಇರಾನಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ತಮ್ಮ ಸಂಸದ ಸ್ಥಾನವನ್ನು ವಾಪಸ್ ಪಡೆದ ಬಳಿಕ ಸಂಸತ್ ನಲ್ಲಿ ಮೊದಲ ಭಾಷಣ ಮಾಡಿದ್ದಾರೆ. ರಾಜಸ್ಥಾನದಲ್ಲಿ ಕಾರ್ಯಕ್ರಮ ಒಂದು ನಿಗದಿಯಾಗಿದ್ದ ಕಾರಣಕ್ಕೆ ಭಾಷಣದ ಬಳಿಕ ಪ್ರತಿಕ್ರಿಯೆ ಪಡೆಯುವುದಕ್ಕೆ ಲೋಕಸಭೆಯಲ್ಲಿ ಇರಲಿಲ್ಲ. ಭಾಷಣ ಮುಗಿಸಿ ಹೊರಟು ಬಿಟ್ಟಿದ್ದಾರೆ. ಈ ವೇಳೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಆರೋಪ ಮಾಡಿದ ಸ್ಪ್ಮತಿ ಇರಾನಿ, ನನಗಿಂತ ಮೊದಲು ಮಾತನಾಡಿದ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದಾರೆ. ಸ್ತ್ರೀದ್ವೇಷಿಯಾಗಿರುವ ಪುರುಷ ಮಾತ್ರ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಬಹುದು. ಇದು ಅವರ ಕುಟುಂಬ ಮತ್ತು ಪಕ್ಷವು ಮಹಿಳೆಯರ ಬಗ್ಗೆ ಅವರ ಭಾವನೆ ಏನಿದೆ ಎಂಬುದನ್ನು ತೋರಿಸುತ್ತದೆ. ಇಂತಹ ಅಮಾನವೀಯ ನಡವಳಿಕೆಯನ್ನು ದೇಶದ ಸಂಸತ್ತಿನಲ್ಲಿ ಹಿಂದೆಂದೂ ಕಂಡಿರಲಿಲ್ಲ ಎಂದಿದ್ದಾರೆ.