ಮೈಸೂರು: ಸಿದ್ದರಾಮಯ್ಯ ಅವರು ದಾಖಲೆ ಮಾಡಿ ಆಯ್ತು. ಇನ್ನು ಡಿಕೆ ಶಿವಕುಮಾರ್ ಸಿಎಂ ಆಗುವುದಕ್ಕೆ ಇದ್ದಂತ ಅಡ್ಡಗೋಡೆಗಳು ನಿವಾರಣೆ ಆಗಿದ್ದಾವೆ ಎಂಬ ಚರ್ಚೆಗಳು ಶುರುವಾಗಿವೆ. ಡಿಕೆ ಶಿವಕುಮಾರ್ ಅವರು ಕೂಡ ಆ ಪ್ರಯತ್ನದ ಹಾದಿಯಲ್ಲಿಯೇ ಇದ್ದಾರೆ. ಇದರ ಬಗ್ಗೆ ಮಾತನಾಡುವುದಕ್ಕೆ ದೆಹಲಿಗೆ ಕೂಡ ಹೋಗಿ ಬಂದಿದ್ದರು. ಆದರೆ ಹೈಕಮಾಂಡ್ ನಾಯಕರು ಭೇಟಿಗೆ ಸಿಕ್ಕಿರಲಿಲ್ಲ. ಇದೀಗ ನಾಯಕ ರಾಹುಲ್ ಗಾಂಧಿ ಅವರೇ ಮೈಸೂರಿಗೆ ಬರ್ತಿದ್ದಾರೆ. ಅಲ್ಲಿ ಡಿಕೆ ಶಿವಕುಮಾರ್ ಭೇಟಿಯಾಗುವ ಎಲ್ಲಾ ಸಾಧ್ಯತೆಗಳು ಇದಾವೆ.
ರಾಹುಲ್ ಗಾಂಧಿ ಅವರು 15 ನಿಮಿಷಗಳ ಕಾಲ ಮೈಸೂರು ವಿಮಾನ ನಿಲ್ದಾಣದಲ್ಲಿ ಇರಲಿದ್ದಾರೆ. ಇಂದು ಮಧ್ಯಾಹ್ನ 2.20ಕ್ಕೆ ರಾಹುಲ್ ಗಾಂಧಿ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 15 ನಿಮಿಷಗಳ ನಿಲ್ದಾಣದಲ್ಲಿ ಇದ್ದು, ನಂತರ ತಮಿಳುನಾಡಿನ ಗುಡ್ಲುರಿಗೆ ಪ್ರಯಾಣಿಸಲಿದ್ದಾರೆ. ಸಂಜೆ 5.45ಕ್ಕೆ ಹೆಲಿಕಾಪ್ಟರ್ ನಲ್ಲಿ ತಮಿಳುನಾಡಿನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ರಾಹುಲ್ ಮರಳಲಿದ್ದಾರೆ. ತಮಿಳುನಾಡಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಬರುತ್ತಿದ್ದಾರೆ.
ಈ ವೇಳೆ ಡಿಕೆ ಶಿವಕುಮಾರ್ ಕೂಡ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿ, ಕುಶಲೋಪರಿಯನ್ನು ವಿಚಾರಿಸಲಿದ್ದಾರೆ. ಅದರಲ್ಲೂ ಇಬ್ಬರ ಭೇಟಿ ಮಹತ್ವವಾದದ್ದಾಗಿದೆ. ಸಿಎಂ ಆಗ್ಬೇಕು ಎಂಬ ಆಸೆ ಇರುವ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಅವರ ಭೇಟಿ, ಬಹಳ ಮುಖ್ಯವಾಗಿದೆ. ನಿನ್ನೆಯೆಲ್ಲಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದರು. ಇಂದು ರಾಹುಲ್ ಗಾಂಧಿ ಅವರು ತಮಿಳುನಾಡಿಗೆ ತೆರಳುವುದಕ್ಕೂ ಮುನ್ನ ಭೇಟಿಯಾಗಲಿದ್ದಾರೆ.

