ನವದೆಹಲಿ: ಮೋದಿ ಸಮುದಾಯದ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಆದರೆ ಇದೀಗ ಮತ್ತೊಂದು ಕೇಸ್ ದಾಖಲಾಗಿದೆ. ಆರ್ ಎಸ್ ಎಸ್ ನ ನಾಯಕರೊಬ್ಬರು ರಾಹುಲ್ ಗಾಂಧಿ ವಿರುದ್ಧ ಸಿಡಿದೆದ್ದಿದ್ದು, ದೂರು ನೀಡಿದ್ದಾರೆ.
ರಾಹುಲ್ ಗಾಂಧಿ ಪಕ್ಷ ಸಂಘಟನೆಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಭಾರತ್ ಜೋಡೋ ಯಾತ್ರೆ ನಡೆಸಿದ್ದಾರೆ. ಈ ಯಾತ್ರೆಯಲ್ಲಿ ನೀಡಿದ್ದ ಒಂದು ಹೇಳಿಕೆಯಿಂದ ಈಗ ದೂರು ದಾಖಲಾಗಿದೆ. ಕಳೆದ ಕನವರಿ 9ರಂದು ಹರಿಯಾಣದ ಅಂಬಾಲದಲ್ಲಿ ಈ ಹೇಳಿಕೆ ನೀಡಿದ್ದರು. “21ನೇ ಶತಮಾನದ ಕೌರವರು ಖಾಕಿ ಚೆ್ಡಿ ಧರಿಸಿರುತ್ತಾರೆ, ಕೈಯಲ್ಲಿ ಲಾಠಿ ಹಿಡಿದಿರುತ್ತಾರೆ, ಶಾಖೆ ಮಾಡುತ್ತಾರೆ” ಅಂತ ಹೇಳಿದ್ದರು.
RSS ನಾಯಕ ಕಮಲ್ ಬಹದೂರಿಯವರು ಇದೀಗ ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ್ದಾರೆ. ಹರಿದ್ವಾರದ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾರೆ. ಇದೇ ತಿಂಗಳ 12ರಂದು ಇದರ ವಿಚಾತಣೆ ನಡೆಯಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಿದೆ. ಲೋಕಸಭಾ ಚುನಾವಣೆಯೂ ಬಹಳ ದೂರವೇನು ಇಲ್ಲ. ಆದರೆ ರಾಹುಲ್ ಗಾಂಧಿಗೆ ಚುನಾವಣಾ ಪ್ರಚಾರಕ್ಕಿಂತ ಕೋರ್ಟ್ ಮೆಟ್ಟಿಲೇರುವುದೇ ಜಾಸ್ತಿಯಾಗುತ್ತಿದೆ.