ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ ಇಡಿ ಕಚೇರಿಯಲ್ಲಿ ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆಯೆಲ್ಲ ಮುಗಿದ ಬಳಿಕ ಟ್ವೀಟ್ ಮಾಡಿದ್ದು, ಅದರಲ್ಲಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಇದೊಂದು ಮಹಾ ಜುಮ್ಲಾಗಳ ಸರ್ಕಾರವೆಂದು ತೆಗಳಿದ್ದಾರೆ.
ಕಳೆದ ಎಂಟು ವರ್ಷಗಳ ಹಿಂದೆ ಪ್ರಧಾನಿ ಮೋದಿ ಎರಡು ಕೋಟಿ ಉದ್ಯೋಗ ನೀಡುವ ಭರವಸೆಯನ್ನು ನೀಡಿದ್ದರು. ಈಗ 10 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಸರದಿ ಬಂದಿದೆ. ಇದು ಜುಮ್ಲಾಗಳ ಸರ್ಕಾರವಲ್ಲ, ಮಹಾ ಜುಮ್ಲಾಗಳ ಸರ್ಕಾರ. ಪ್ರಧಾನಿ ಮೋದಿ ಉದ್ಯೋಗ ಸೃಷ್ಟಿಸುವುದರಲ್ಲಿ ಪರಿಣಿತರಲ್ಲ, ಉದ್ಯೋಗದ ಸುದ್ದಿ ಸೃಷ್ಟಿಸುವುದರಲ್ಲಿ ಪರಿಣಿತರು ಎಂದಿದ್ದಾರೆ.
ಮೋದೀಜಿ ಮತ್ತೊಮ್ಮೆ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ 1.5 ವರ್ಷಗಳಲ್ಲಿ ಹತ್ತು ಲಕ್ಷ ಸರ್ಕಾರಿ ಹುದ್ದೆ ನೀಡುವ ಭರವಸೆ ನೀಡಿದ್ದಾರೆ. 60 ಲಕ್ಷ ಹುದ್ದೆ ಖಾಲಿ ಇರುವಾಗ ಹತ್ತು ಲಕ್ಷದ ಬಗ್ಗೆ ಮಾತನಾಡಿ ಯಾರನ್ನೂ ಗೊಂದಲಕ್ಕೀಡು ಮಾಡುತ್ತಿದ್ದೀರಿ ಮೋದಿಜೀ ಎಂದು ಟ್ವೀಟ್ ಮಾಡಿದ್ದಾರೆ.