ದರ್ಶನ್ ಅಭಿಮಾನಿಯಾಗಿದ್ದ ರಘುಗೆ ಕೊನೆಯದಾಗಿಯೂ ತಾಯಿ ಮುಖ ನೋಡಲಾಗಲಿಲ್ಲ..!

1 Min Read

 

ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಎ4 ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿರುವ ರಘು ನತದೃಷ್ಟ ಅಂತಾನೇ ಹೇಳಬಹುದು. ಆತನ ಇಡೀ ಜೀವಮಾನದಲ್ಲಿ ಇಂದಿನ ಘಟನೆಯನ್ನು ಆತ ಮರೆಯುವುದಕ್ಕೆ ಸಾಧ್ಯವೇ ಇಲ್ಲವೇನೊ. ರಘು ತಾಯಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದು, ತಾಯಿಯನ್ನು ಕೊನೆಯದಾಗಿಯೂ ನೋಡುವುದಕ್ಕೆ ಆಗಿಲ್ಲ.

ರಘು ಜೈಲು ಸೇರಿದಾಗಿನಿಂದ ಅವರ ತಾಯಿ ಮಂಜುಳ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಗನ ಸ್ಥಿತಿ ಹೀಗಾಯ್ತಲ್ಲ ಅಂತ ಕೊರಗಿ ಕೊರಗಿ ಹಾಸಿಗೆ ಹಿಡಿದಿದ್ದರು. ಆದರೆ ಇಂದು ಇಹಲೋಕ ತ್ಯಜಿಸಿದರು. ಅಂತ್ಯ ಸಂಸ್ಕಾರಕ್ಕೆ ರಘುನನ್ನು ಕಳುಹಿಸಿಕೊಡಿ ಎಂದು ಮನವಿ ಕೂಡ ಮಾಡಿದ್ದರು. ಬರಬಹುದು ಎಂದು ಸಂಜೆ ತನಕ ಕಾದರು. ಆದರೆ ಮಗ ಬರದೇ ಇದ್ದ ಕಾರಣ, ಮೃತದೇಹವನ್ನು ಹೆಚ್ಚು ಸಮಯ ಇಡಲು ಆಗದ ಕಾರಣ, ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.

ಚಿತ್ರದುರ್ಗದ ಕೋಳಿ ಬುರಜನಹಟ್ಟಿಯಲ್ಲಿ ಮಂಜುಳಾ ನಿಧನರಾಗಿದ್ದರು. ಅಂತ್ಯ ಸಂಸ್ಕಾರ ಕೂಡ ಮುಗಿಸಿದ್ದಾರೆ. ತಾಯಿ‌ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಘು ದುಃಖಿತನಾಗಿದ್ದಾನೆ. ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕೋರ್ಟ್ ಅನುಮತಿ ಕೇಳಿದ್ದರು. ರಘು ಅರ್ಜಿಗೆ ಕೋರ್ಟ್ ಕೂಡ ಸಮ್ಮತಿ ನೀಡಿತ್ತು. ಆದರೆ ರಘು ಊರಿಗೆ ಬರುವಷ್ಟರಲ್ಲಿ ಅಂತ್ಯ ಸಂಸ್ಕಾರ ನಡೆದು ಹೋಗಿದೆ. ದರ್ಶನ್ ಅಭಿಮಾನ ಸಂಘದ ಅಧ್ಯಕ್ಷನಾಗಿದ್ದ ರಘು, ರೇಣುಕಾಸ್ವಾಮಿಯ ಕೊಲೆ ಕೇಸಲ್ಲಿ ಭಾಗಿಯಾಗಿ, ಇಂದು ತಾಯಿಯ ಮುಖವನ್ನು ಕೊನೆಯದಾಗಿಯೂ ನೋಡಲಾಗದಂತ ಸ್ಥಿತಿಗೆ ತಲುಪಿದ್ದಾರೆ. ರಘು ಬರುವುದಿಲ್ಲವೇನೋ ಎಂದುಕೊಂಡು ಕುಟುಂಬಸ್ಥರು ಅದಾಗಲೇ ಮಂಜುಳಾ ಅವರ ಅಂತ್ಯ ಸಂಸ್ಕಾರವನ್ನು ಮುಗಿಸಿದ್ದರು. ಹೀಗಾಗಿ ರಘುಗೆ ಕೊನೆಯದಾಗಿಯೂ ಅವರ ತಾಯಿ ಮುಖವನ್ನು ನೋಡುವುದಕ್ಕೆ ಆಗಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks