ನೋವು ತಡೆಯಲಾಗ್ತಿಲ್ಲ..ಆದ್ರೆ ಸತ್ಯಾಂಶ ಒಪ್ಪಲೇ ಬೇಕಲ್ಲವೇ : ರಾಘವೇಂದ್ರ ರಾಜ್‍ಕುಮಾರ್
ಬೆಂಗಳೂರು: ಅಪ್ಪು ಇನ್ನಿಲ್ಲ ಅನ್ನೋದು ಸತ್ಯ.. ಇಂದಿಗೆ ನಾಲ್ಕು ದಿನ ಅಪ್ಪುರನ್ನು ಕರ್ನಾಟಕ ಜನತೆ ಕಳೆದುಕೊಂಡು. ಓಡಾಡಿಕೊಂಡು, ಎಲ್ಲರೊಂದಿಗೂ ನಗು ನಗುತ್ತಾ ಇದ್ದ ಅಪ್ಪು ಇದ್ದಕ್ಕಿದ್ದಂತೆ ಇಲ್ಲ ಅಂದ್ರೆ ಅದೇಗೆ ಅರಗಿಸಿಕೊಳ್ಳೋದಕ್ಕೆ ಸಾಧ್ಯ. ಬರೀ 46 ವರ್ಷ ಅಷ್ಟೇ ವಯಸ್ಸು. ಅನಾರೋಗ್ಯದ ಕಾರಣವಿಲ್ಲ ಮತ್ತಿನೇನೋ ಸಮಸ್ಯೆಯಿಂದ ಬಳಲಿದವರಲ್ಲ. ಯಾರೇ ಬಂದರೂ ಅವರನ್ನ ಆತ್ಮೀಯವಾಗಿ ತಬ್ಬುತ್ತಿದ್ದವರು. ದೂರದಿಂದ ನೋಡಿದವರಿಗೆ ಅವರ ಸಾವನ್ನ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ ಎಂದಾದಾಗ ಇನ್ನು ಮನೆಯವರಿಗರ ಇದು ಸಾಧ್ಯವಾ..?
ಅಪ್ಪು ಇಲ್ಲದ ದಿನಗಳ ಬಗ್ಗೆ ರಾಘವೇಂದ್ರ ರಾಜ್‍ಕುಮಾರ್ ಮನೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ತಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಎಲ್ಲರೂ ಬಂದು ಸಮಾಧಾನ ಮಾಡುತ್ತಿದ್ದಾರೆ. ಆದರೆ ಆ ನೋವನ್ನ ತಡೆಯೋದಕ್ಕೆ ಆಗ್ತಿಲ್ಲ. ನಿಜಾಂಶವನ್ನ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯೂ ಇದೆ. ಜನರು ಕೊಟ್ಟಿರೋ ಪ್ರೀತಿ, ವಿಶ್ವಾಸ ನಮಗೆ ಧೈರ್ಯ ತುಂಬಿದೆ.
ಅಪ್ಪ ಅಮ್ಮ ಹೋದಾಗ ಆದ ನೋವಿಗಿಂತ ಅಪ್ಪು ಹೋದದ್ದು ಹೆಚ್ಚು ನೋವು ಕೊಟ್ಟಿದೆ. ಅಪ್ಪನಿಗೆ ವಯಸ್ಸಾಗಿತ್ತು ಅನ್ನೋ ಒಂದು ಭಾವನೆ ಇತ್ತು. ಆದ್ರೆ ಅಪ್ಪು..? ನಮಗೆ ಆದಷ್ಟೇ ನೋವು ಅಭಿಮಾನಿಗಳಿಗೂ ಆಗಿದೆ. ಆದ್ರೆ ಸತ್ಯವನ್ನ ಒಪ್ಪಿಕೊಳ್ಳಲೇಬೇಕು. ಆ ನೋವನ್ನ ತಡೆದುಕೊಳ್ಳಲೇ ಬೇಕಲ್ಲ. ಮಳೆಯಿಂದಾಗಿ ಸಮಾಧಿಯ ಜಾಗದಲ್ಲಿ ಸ್ವಲ್ಪ ಗಲೀಜಾಗಿದೆ. ಅದನ್ನ ಕ್ಲೀನ್ ಮಾಡ್ಬೇಕು. ಅಭಿಮಾನಿಗಳಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸೋಮವಾರ ಹಾಲು ತುಪ್ಪ ಬಿಡುವ ಕಾರ್ಯವಿದೆ. 12ನೆ ದಿನದ ಕಾರ್ಯ ಇನ್ನು ನಿಗಧಿಯಾಗಿಲ್ಲ. ಹೇಗೆ..? ಏನು ಎಂಬುದರ ಬಗ್ಗೆಯೂ ಮಾಹಿತಿ ನೀಡುತ್ತೇವೆ ಎಂದು ದುಃಖವನ್ನ ಮನದಲ್ಲೇ ಅದುಮಿಟ್ಟುಕೊಂಡು ರಾಘಣ್ಣ ಮಾತನಾಡಿದ್ದಾರೆ.