ಬೆಂಗಳೂರು: ಒಂದು ಕಡೆ ಅಪ್ಪು ಕನಸಿನ ಸಿನಿಮಾ ಗಂಧದ ಗುಡಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಈ ಸಿನಿಮಾ ನೋಡಲೇಬೇಕು ಅಂತ ಟೀಂನಲ್ಲಿ ಹೋಗುವವರು, ಫ್ಯಾಮಿಲಿ ಹೋಗುವವರು ಹೋಗುತ್ತಿದ್ದಾರೆ. ಸದ್ಯಕ್ಕೆ ಇರುವ ಶೋಗಳೆಲ್ಲಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಇಂದು ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ, ಗೌರವ ಸೂಚಿಸಿಲಾಗಿದೆ. ಈ ಬಗ್ಗೆ ರಾಘಣ್ಣ ಮಾತನಾಡುತ್ತಾ, ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ.
ಒಬ್ಬೊಬ್ಬರಿಗೂ ಒಂದೊಂದು ಶಕ್ತಿ ಇರುತ್ತದೆ. ಈ ಸಂದರ್ಭಕ್ಕೆ ಹೆಮ್ಮೆ ಪಟ್ಟುಕೊಳ್ಳಬೇಕು. ಅಂದು ಅಪ್ಪಾಜಿ ಕರ್ನಾಟಕ ರತ್ನ ಪ್ರಶಸ್ತಿ ಪಡೆಯುವಾಗ ನಮ್ಮನ್ನು ಕರೆದುಕೊಂಡು ಹೋಗಿದ್ದರು. ಇಂದು ನನ್ನ ತಮ್ಮ ಅಪ್ಪು ಕರೆದುಕೊಂಡು ಹೋಗಿದ್ದಾನೆ. ಇಂಥ ಸಂದರ್ಭ ತುಂಬಾನೇ ಖುಷಿ ಕೊಡುತ್ತೆ. ಪ್ರಾಣಿ, ಕಾಡಿನ ಬಗ್ಗೆ ಇದ್ದ ಅವನ ಕಾಳಜಿಯಿಂದ ಗಂಧದ ಗುಡಿ ಸಿನಿಮಾ ಮಾಡಿದೆ. ಪಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಚಿಕ್ಕ ಮಕ್ಕಳಿಗೂ ಕಲಿಸಬೇಕಿದೆ. ಅದು ನಿಜವಾದ ಅವಾರ್ಡ್ ಎಂದಿದ್ದಾರೆ.
ಇನ್ನು ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮೊದಲು ಮಳೆರಾಯ ಬಂದು ಹೋಗಿದ್ದಾನೆ. ಆದರೆ ಅಭಿಮಾನಿಗಳು ಈ ಕಾರ್ಯಕ್ರಮವನ್ನು ಕಣ್ಣು ತುಂಬಿಕೊಂಡಿದ್ದಾರೆ. ಈ ಬಗ್ಗೆ ರಾಘಣ್ಣ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದು, ಮಳೆಯಲ್ಲೂ ನಿಂತು ಕಾರ್ಯಕ್ರಮ ನೋಡಿದ್ದೀರಿ ಧನ್ಯವಾದಗಳು ಎಂದಿದ್ದಾರೆ.