ರಾಘಣ್ಣನಿಗೆ ಅಪ್ಪು ಜೊತೆಗಿನ ಬಾಂಧವ್ಯ ಎಂತದ್ದು ಎಂಬುದು ಈಗಾಗಲೇ ಪ್ರೂವ್ ಆಗಿದೆ. ಅಪ್ಪು ನಿಧನರಾದಾಗಿನಿಂದ ರಾಘಣ್ಣ ಮಂಕಾಗಿ ಬಿಟ್ಟಿದ್ದಾರೆ. ತನ್ನನ್ನು ತಂದೆಯಂತೆಯೇ ನೋಡಿಕೊಂಡಿದ್ದ ಅಪ್ಪು ಹೋದ ಮೇಲೆ ತೀರಾ ನೋವಿನಲ್ಲಿದ್ದಾರೆ. ಆಗಾಗ ನೋವನ್ನು ಹೊರ ಹಾಕುವ ರಾಘಣ್ಣ, ಅಭಿಮಾನಿಗಳಿಗೆ ಅಪ್ಪು ಎಂದರೆ ಸೆಲೆಬ್ರೇಷನ್ ಅಂತ ದುಃಖ ಮರೆಸುತ್ತಿರುತ್ತಾರೆ. ಇಂದು ಅಪ್ಪು ಸಿನಿಮಾಗಾಗಿ ಅಭಿಮಾನಿಗಳ ಜೊತೆ ಸೇರಿ ಕುಣಿದಿದ್ದಾರೆ.
ಇಂದು ರಾಜ್ಯ ಮಾತ್ರವಲ್ಲದೆ, ವಿದೇಶಗಳಲ್ಲೂ ಗಂಧದ ಗುಡಿ ಸಿನಿಮಾ ತೆರೆಕಂಡಿದೆ. ರಾಜ್ಯದಲ್ಲಿ 200 ಥಿಯೇಟರ್ಗಳು, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ತೆರೆಗೆ ಬಂದಿದ್ದು, ಎಲ್ಲವೂ ಹೌಸ್ ಫುಲ್ ಆಗಿದೆ. ಸಾಕಷ್ಟು ಸಮಯದಿಂದ ಕಾಯುತ್ತಿದ್ದ ಗಂಧದ ಗುಡಿ ಇಂದು ರಿಲೀಸ್ ಆಗಿದ್ದು, ಅಭಿಮಾನಿಗಳ ಪಾಲಿಗೆ ಹಬ್ಬವಾಗಿದೆ.
ಕಟೌಟ್ ನಿಲ್ಲಿಸಿ, ಹಾಲಿನ ಅಭಿಷೇಕ ಮಾಡಿ, ಡ್ಯಾನ್ಸ್ ಮೂಲಕ ಅಪ್ಪುಗೆ ಅಭಿಮಾನದ ಮಳೆ ಸುರಿಸಿದ್ದಾರೆ. ಅಣ್ಣಾವ್ರ ಫ್ಯಾಮಿಲಿ, ಯಾವಾಗಲೂ ಅಭಿಮಾನಿಗಳೇ ನಮ್ಮನೆ ದೇವ್ರು ಎನ್ನುವವರು. ಅಭಿಮಾನಿಗಳ ಜೊತೆಗೂಡಿ ಇದೀಗ ರಾಘಣ್ಣ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾ ನೋಡುವುದಕ್ಕೆ ಥಿಯೇಟರ್ ಗೆ ಬಂದ ರಾಘವೇಂದ್ರ ರಾಜ್ ಮಾರ್ ಅಭಿಮಾನಿಗಳ ಸಂಭ್ರಮದ ಜೊತೆಗೆ ಬೆರೆತು ಸಂಭ್ರಮಿಸಿದ್ದಾರೆ.