ಪುನೀತ ಪರ್ವದಲ್ಲಿ ರಾಘಣ್ಣ ಹಾಡು, ಶಿವಣ್ಣನ ಡ್ಯಾನ್ಸ್ ಕೂಡ ಇರಲಿದೆ

suddionenews
1 Min Read

 

ಇಂದು ಪುನೀತ ಪರ್ವ ಕಣ್ತುಂಬಿಕೊಳ್ಳುವುದಕ್ಕೆ ಇಡೀ ಅಣ್ಣಾವ್ರ ಕುಟುಂಬದ ಅಭಿಮಾನಿ ಬಳಗ ಕಾಯುತ್ತಿದ್ದಾರೆ. ಒಂದು ಕಡೆ ಅಪ್ಪು ಇಲ್ಲ ಎಂಬ ನೋವಿನೊಂದಿಗೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಖುಷಿ ಖುಷಿಯಲ್ಲಿಯೇ ಭಾಗಿಯಾಗಲಿದ್ದಾರೆ. ಸಂಜೆ ವೇಳೆಗೆ ಪುನೀತ ಪರ್ವ ರಂಗೇರಲಿದ್ದು, ವೇದಿಕೆ ಮೇಲೆ ಎಲ್ಲರ ಕಣ್ಣುಗಳು ಒದ್ದೆಯಾಗುವ ಪ್ರಸಂಗವೂ ಕ್ರಿಯೇಟ್ ಆಗುವ ಸಾಧ್ಯತೆ ಇದೆ.

ಗಂಧದ ಗುಡಿ. ಅಪ್ಪು ಕನಸಿನ ಕೂಸು. ಅಪ್ಪು ನಟಿಸಿದ ಕಡೆಯ ಸಿನಿಮಾ. ಅಕ್ಟೋಬರ್ 28ರಂದು ಅದ್ದೂರಿಯಾಗಿ ತೆರೆಗೆ ಬರುವ ಸಿನಿಮಾವನ್ನು ಅಭಿಮಾನಿಗಳು ಅಪ್ಪುವುದಕ್ಕೆ ರೆಡಿಯಾಗಿದ್ದಾರೆ. ಅದಕ್ಕೂ ಮುನ್ನ ಇಂದು ಪ್ಯಾಲೇಸ್ ಗ್ರೌಂಡ್ ನಲ್ಲಿ ಬೃಹತ್ ವೇದಿಕೆ ಮೇಲೆ ತೆಲುಗು, ಮಲಯಾಳಂ ನಟರ ಜೊತೆಗೆ ಅಣ್ಣಾವ್ರ ಫ್ಯಾಮಿಲಿ ಹಾಗೂ ಸ್ಯಾಂಡಲ್ ವುಡ್ ದಿಗ್ಗಜರೆಲ್ಲಾ ನೆರೆಯುತ್ತಾರೆ.

ಈ ಕಾರ್ಯಕ್ರಮದಲ್ಲಿ ಅಪ್ಪು ಹಾಡುಗಳು ಮೇಳೈಸಲಿದೆ. ಅಪ್ಪುಗಾಗಿ ಪ್ರಭುದೇವ, ರಮ್ಯಾ ಹೆಜ್ಜೆ ಹಾಕಲಿದ್ದಾರೆ. ಇನ್ನು ಈ ಬಗ್ಗೆ ರಾಘಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿದ್ದು, ಅಪ್ಪು ಹಾಡಿದ್ದ ಹಾಡನ್ನು ಈ ಕಾರ್ಯಕ್ರಮದಲ್ಲಿ ನಾನು ಹಾಡುತ್ತಿದ್ದೇನೆ. ಹಾಗೇ ಶಿವಣ್ಣ ಡ್ಯಾನ್ಸ್ ಮಾಡುತ್ತಾರೆ. ಹೃದಯಪೂರ್ವಕವಾಗಿ ಈ ಕಾರ್ಯಕ್ರಮವನ್ನು ನೀವೂ ಚೆನ್ನಾಗಿ ನಡೆಸಿಕೊಡುತ್ತೀರಿ. ಅಪ್ಪು ಹೋದಾಗಿನಿಂದ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೀರಿ. ಇಂದು ಕೂಡ ನಿಮ್ಮಿಂದ ಅದೇ ಸಹಕಾರ ಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *