ನಾನು ರಮ್ಯಾ ಪರ ಎಂದ ರಚಿತಾ ರಾಮ್ : ದರ್ಶನ್ ಫ್ಯಾನ್ಸ್ ಗೆ ಹೇಳಿದ್ದೇನು..?

1 Min Read

 

ಬೆಂಗಳೂರು: ಇಂದು ನಟಿ ರಚಿತಾ ರಾಮ್ ಹುಟ್ಟುಹಬ್ಬ. ಹೀಗಾಗಿ ನಿನ್ನೆ ರಾತ್ರಿಯಿಂದಾನೂ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ರಚಿತಾ ರಾಮ್ ಎಂದರೆ ದರ್ಶನ್ ಅಭಿಮಾನಿಗಳಿಗೂ ಅಭಿಮಾನ ಜಾಸ್ತಿ. ಯಾಕಂದ್ರೆ ತಮ್ಮ ಬಾಸ್ ಅವರ ಪರ ಇದಾರೆ ಅನ್ನೋ ಪ್ರೀತಿ. ಇದೀಗ ನಟಿ ರಚಿತಾ ರಾಮ್, ರಮ್ಯಾ ಪರ ಮಾತನಾಡಿದ್ದು, ದರ್ಶನ್ ಫ್ಯಾನ್ಸ್ ಗೆ ಬುದ್ಧಿ ಮಾತು ಹೇಳಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ರಮ್ಯಾಗೆ ಬಂದ ಕೆಟ್ಟ ಕಮೆಂಟ್, ಬಳಿಕ ಆರೋಪಿಗಳು ಅರೆಸ್ಟ್ ಆಗಿದ್ದರ ಬಗ್ಗೆ ಮಾತನಾಡಿದ ರಚಿತಾ ರಾಮ್, ಆ ಬೆಳವಣಿಗೆಗೆ ನಾನು ಬೆಂಬಲ‌ ಕೊಡುತ್ತೇನೆ. ರಮ್ಯಾ ಅವರಿಗೆ ಆಗಿರಬಹುದು, ಬೇರೆ ಯಾರೇ ಹೀರೋಹಿನ್ ಆಗಿರಬಹುದು, ನನಗೆ ಬಂದಿರಬಹುದು, ನನಗೂ ಸಾಕಷ್ಟು ಕೆಟ್ಟ ಕಮೆಂಟ್ಸ್ ಬಂದಿದೆ. ಅದನ್ನ ತೀರಾ ಮನಸ್ಸಿಗೆ ತೆಗೆದುಕೊಂಡಾಗ ತಾನೇ ಕಷ್ಟ ಆಗೋದು.

ನಾನು ತುಂಬಾ ಪ್ರೊಫೈಲ್ ನೋಡಿದ್ದೀನಿ, ಬೇರೆ ಬೇರೆ ಹೀರೋಗಳನ್ನ ಬಳಸಿಕೊಂಡು ಕಮೆಂಟ್ ಮಾಡ್ತಾರೆ. ಆಕ್ಚುಲಿ ಅವರ್ಯಾರು ಅವರ ಅಭಿಮಾನಿಗಳಾಗಿರಲ್ಲ. ಜಸ್ಟ್ ಟ್ರಿಗರ್ ಮಾಡುವುದಕ್ಕೆ ಹೋಗ್ತಾರೆ. ನಾನು ಮಾಡ್ಬೇಡಿ ಅಂದ್ರು ಯಾರು ಕೇಳಲ್ಲ. ತಂದೆ ತಾಯಿ ಮಾತನ್ನೇ ಕೇಳಲ್ಲ ಇನ್ನು ನಮ್ಮ ಮಾತನ್ನ ಕೇಳ್ತಾರಾ..? ಸೆಲೆಬ್ರಿಟಿಗಳು ಅಂತ ಮಾತ್ರವಲ್ಲ ಸಾಮಾನ್ಯ ಹೆಣ್ಣು ಮಕ್ಕಳಿಗೂ ಇದು ಹಿಂಸೆ ಆಗ್ತಿದೆ. ಟೆಕ್ನಾಲಜಿ ಬಳಸಿ ಹೆಣ್ಣು ಮಕ್ಕಳ ಮನಸ್ಸಿಗೆ ನೋವಾಗುತ್ತದೆ. ಆ ಟೆಕ್ನಾಲಜಿಯನ್ನ ಒಳ್ಳೆಯ ರೀತಿ ಬಳಸಿಕೊಳ್ಳಿ ಎಂದು ಎಲ್ಲರಿಗೂ ಮನವಿ ಮಾಡಿದ್ದಾರೆ. ಜೊತೆಗೆ ನೆಗೆಟಿವ್ ಕಮೆಂಟ್ ಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

Share This Article
Enable Notifications OK No thanks