ನವದೆಹಲಿ: ಸಚಿವ ಸಂಪುಟದ ವಿಸ್ತರಣೆ ಮಾಡುವ ಫ್ಲ್ಯಾನ್ ನಡೆಯುತ್ತಿದ್ದು, ಈಗಾಗಲೇ ಸಿಎಂ ಸೇರಿದಂತೆ ಸಚಿವರು ದೆಹಲಿಯಲ್ಲಿ ಹೈಕಮಾಂಡ್ ಭೇಟಿಗೆ ಕಾಯುತ್ತಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಆರ್ ಶಂಕರ್ ಕೂಡ ದೆಹಲಿಗೆ ಪಯಣ ಬೆಳೆಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದಕ್ಕೆ ಇವರು ಕೂಡ ಕಾರಣ ಕರ್ತರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಈ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಆರ್ ಶಂಕರ್ ಅವರು, ನಂಗೆ ನೂರಕ್ಕೆ ನೂರರಷ್ಟು ನಂಬಿಕೆ ಇದೆ. ಯಾಕಂದ್ರೆ ನಮ್ಮ ತ್ಯಾಗದ ಪರಿಶ್ರಮಕ್ಕೆ ಬೆಲೆ ಸಿಗುವ ವಿಶ್ವಾಸವಿದೆ. ಈಗಲೂ ಕಾಲ ಮಿಂಚಿಲ್ಲ. ಈ ವರ್ಷದಲ್ಲಾದರೂ ನಮ್ಮ ತ್ಯಾಗಕ್ಕೆ ಬೆಲೆ ಸಿಕ್ಕರೆ ನಮ್ಮ ಕ್ಷೇತ್ರದ ಮತದಾರರ ಋಣ ತೀರಿಸದಂತಾಗುತ್ತದೆ. ಆ ನಂಬಿಕೆಯಲ್ಲೇ ನಾನು ಇದ್ದೇನೆ. ಇಲ್ಲಿವರೆಗೂ ನಾನು ಎಲ್ಲಿ ಏನನ್ನು ಪ್ರಸ್ತಾಪ ಮಾಡಿಲ್ಲ. ಈಗ ದೆಹಲಿಗೆ ಬಂದಿದ್ದೇನೆ. ನೀವೂ ಪ್ರಶ್ನೆ ಮಾಡಿದ್ದಕ್ಕೆ ನಾನು ನನ್ನ ಮನಸ್ಸಿನ ಭಾವನೆಯನ್ಬು ಹೇಳುತ್ತಿದ್ದೇನೆ. ವರಿಷ್ಠರು ಏನು ಹೇಳ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ.
ಅನುದಾನವನ್ನು ತಂದು ಕೆಲಸ ಕಾರ್ಯಗಳನ್ನು ಮಾಡಬೇಕೆಂಬ ನಿರೀಕ್ಷೆಯಲ್ಲಿ ನಾನಿದ್ದೇನೆ. ಅದಕ್ಕಾಗಿಯೇ ನಾನು ಸೇರಿದಂತೆ ಹದಿನೇಳು ಶಾಸಕರು ಸೇರಿ ಈ ಬಿಜೆಪಿ ಸರ್ಕಾರವನ್ನು ತಂದಿದ್ದು.
ಸುಪ್ರೀಂ ಕೋರ್ಟ್ ನ ಆದೇಶದಂತೆ ಅನರ್ಹ ಎಂಬ ಕಟ್ಟಿಕೊಂಡು ಸುಮಾರು ದಿನಗಳ ಕಾಲ ಅನರ್ಹನಾಗಿ ಉಳಿದುಕೊಂಡು ತದ ನಂತರ ಎಂಎಲ್ಸಿಯಾಗಿ ಉಳಿದುಕೊಂಡು ಕೆಲವೇ ದಿನಗಳು ಮಾತ್ರ ಮಂತ್ರಿಯಾಗಿ ಕೆಲಸ ಮಾಡಿದೆ. ಆದರೆ ಇಂದು ನನ್ನ ಮತದಾರರು ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡು ಮತ ನೀಡಿದ್ದಾರೆ. ಆದರೆ ಮತ ನೀಡಿದವರಿಗೆ ಹೆಚ್ಚಿನದ್ದಾಗಿ ಕೆಲಸ ಮಾಡಲು ಆಗುತ್ತಿಲ್ಲ. ಈ ಬಾರಿ ಕ್ಯಾಬಿನೇಟ್ ನಲ್ಲಿ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಮಾಜಿ ಸಚಿವ ಆರ್ ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.