ಕಾಲೇಜಿಗೆ ಪರೀಕ್ಷೆ ಬರೆಯಲು ಹೋದವರು ವಾಪಾಸ್ ಬರಲೇ ಇಲ್ಲ : ತುಮಕೂರಿನಲ್ಲಿ ಭೀಕರ ಅಪಘಾತ

suddionenews
1 Min Read

ತುಮಕೂರು: ಖಾಸಗಿ ಬಸ್ ಪಲ್ಟಿಯಾಗಿ 4 ಜನ ದುರ್ಮರಣವಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಪಾವಗಡದ ಪಳವಳ್ಳಿ ಕಟ್ಟೆ ಬಳಿ ಈ ಘಟನೆ ನಡೆದಿದೆ. ತಿರುವಿನಲ್ಲೂ ಅತಿ ವೇಗವಾಗಿ ಬಸ್ ಚಾಲನೆ ಮಾಡಿದ್ದರಿಂದ ಈ ಘಟನೆ ನಡೆದಿದೆ.

ಈ ಬಸ್ ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಮಕ್ಕಳು ಇದ್ದರು. ಪರೀಕ್ಷೆ ಸಮಯ ಆಗಿದ್ದರಿಂದ ಇದೇ ಬಸ್ ನ್ನ ಕ್ಯಾಚ್ ಮಾಡಿದ್ದರು. ಆದ್ರೆ ಪರೀಕ್ಷೆ ಕೇಂದ್ರವೂ ತಲುಪದೇ ಮಸಣ ಸೇರಿದ್ದಾರೆ. ಇನ್ನು ಕೆಲಸಕ್ಕೆ ತೆರಳಿದ್ದವರು ಮೃತರಾಗಿದ್ದಾರೆ. ಎಂಟು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಸ್ ಮೇಲಿನ ಟಾಪ್ ನಲ್ಲಿ‌ ಕುಳಿತಿದ್ದವರಿಗೂ ಗಂಭೀರ ಗಾಯವಾಗಿದೆ. ಓವರ್ ಲೋಡ್, ಓವರ್ ಸ್ಪೀಡ್ ನಿಂದಾಗಿಯೇ ಬಸ್ ದುರಂತ ನಡೆದಿದೆ. ಎರಡು ಬಸ್ ಇಲ್ಲದ ಕಾರಣ ಒಂದೇ ಬಸ್ ಹತ್ತಿದ್ದರು.

ರಾಹುಲ್ ಕುಮಾರ್ ಎಸ್ ಪಿ ಹೇಳುವ ಪ್ರಕಾರ, ನಾಲ್ಕು ಜನ ಮರಣ ಹೊಂದಿದ್ದಾರೆ. 15-20 ಜನ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಮೃತದೇಹಗಳನ್ನ ಪಾವಗಡ ಆಸ್ಪತ್ರೆಗೆ ರವಾನಿಸಲಾಗಿದೆ. 25 ಜನಕ್ಕೂ ಹೆಚ್ಚು ಗಾಯವಾಗಿದೆ. ವೇಗವಾದ ಚಾಲನೆಯೇ ಇದಕ್ಕೆ ಕಾರಣವಿರಬಹುದು. ತನಿಖೆಯ ನಂತರ ಗೊತ್ತಾಗಲಿದೆ. ವಿದ್ಯಾರ್ಥಿಗಳಲ್ಲದೆ ಕೆಲಸಕ್ಕೆ ಹೋಗುವವರು ಸಾಕಷ್ಟು ಜನ ಈ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *