ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 16 : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್.ಮಂಜುನಾಥ್‍ರವರಿಗೆ ಜೋಗಿಮಟ್ಟಿ ರಸ್ತೆಯಲ್ಲಿರುವ ದಾರುಕಾ ಬಡಾವಣೆಯಲ್ಲಿ ಶನಿವಾರ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ದಾರುಕಾ ಬಡಾವಣೆಯ ನಿವಾಸಿಗಳು, ನೂರಾರು ಅಭಿಮಾನಿಗಳು ಹಾಗೂ ಬಂಧು ಬಳಗದವರು ಆರ್.ಮಂಜುನಾಥ್‍ಗೆ ಬೃಹದಾಕಾರವಾದ ಹಾರ ಹಾಕಿ ಅಭಿನಂದಿಸಿದರು.
ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಇರುವ ಹೇಮಾ ಹೇಮಿಗಳ ನಡುವೆ ಆರ್.ಮಂಜುನಾಥ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಕಮ್ಮಿ ಸಾಧನೆಯಲ್ಲ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರು ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡವರು ಎಂದು ನೆರೆದಿದ್ದ ಅಭಿಮಾನಿಗಳು ಹರಸಿ ಹಾರೈಸಿದರು.
ಇದೇ ಸಂದರ್ಭದಲ್ಲಿ ಆರ್.ಮಂಜುನಾಥ್‍ರವರು ಕೇಕ್ ಕತ್ತರಿಸುವ ಮೂಲಕ ತಮ್ಮ 62 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ನಗರಸಭೆ ಮಾಜಿ ಸದಸ್ಯ ಮಹೇಶ್, ಇ.ಶಿವಕುಮಾರ್, ಎಸ್.ಡಿ.ರಾಮಸ್ವಾಮಿ, ಪ್ರೊ.ಚಂದ್ರಶೇಖರ್ ವೇದಿಕೆಯಲ್ಲಿದ್ದರು. ಆರ್.ಮಂಜುನಾಥ್‍ರವರ ಕುಟುಂಬದವರು ಹಾಜರಿದ್ದು, ಆರ್.ಮಂಜುನಾಥ್‍ರವರಿಗೆ ಹುಟ್ಟುಹಬ್ಬದ ಶುಭ ಕೋರಿದರು.

