ಬೆಂಗಳೂರು: ಪಢ್ಯ ಪುಸ್ತಕ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸುತ್ತಿರುವ ಆರ್ ಅಶೋಕ್ ಪಠ್ಯ ಪರಿಷ್ಕರಣೆ ಬಗ್ಗೆ ಮಾತನಾಡಿದ್ದಾರೆ.

ಬರಗೂರು ರಾಮಚಂದ್ರಪ್ಪ ಪಠ್ಯವನ್ನೇ ಮುಂದುವರೆಸಬೇಕು ಅನ್ನೋದಾದ್ರೆ ಕೆಂಪೇಗೌಡರ ಪಠ್ಯ ಕೈಬಿಡಬೇಕಾಗಲಿದೆ. ಕೇವಲ ಕೆಂಪೇಗೌಡರ ಪಠ್ಯ ಮಾತ್ರ ಅಲ್ಲ, ಕುವೆಂಪು ಅವರ ಪಠ್ಯ, ರಾಣಿ ಚೆನ್ನಬೈರಾದೇವಿ ಪಠ್ಯ ಕೈಬಿಡಬೇಕಾಗಲಿದೆ. ಹಾಗಾಗಿ ನಾವು ಏನೇ ಅದ್ರೂ ಬರಗೂರು ರಾಮಚಂದ್ರಪ್ಪ ಪಠ್ಯ ವಾಪಸ್ ತರಲ್ಲ ಎಂದಿದ್ದಾರೆ.

ಕೆಂಪೇಗೌಡರ ಪಠ್ಯ, ಕುವೆಂಪು ಪಠ್ಯವನ್ನ ಸೇರಿಸಿದ್ದೇವೆ. ಅದನ್ನೇ ಪಠ್ಯದಲ್ಲಿ ಭೋದನೆ ಮಾಡುತ್ತೇವೆ. ನಮ್ಮದು ಸೇರಿಸೋ ಸಂಸ್ಕೃತಿ, ಕೈಬಿಡುವ ಸಂಸ್ಕೃತಿ ಅಲ್ಲ ಎಂದು ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.


