ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆಡಳಿತ ನಡೆಯುತ್ತಿದೆ. ಪಕ್ಷ ಸಂಘಟನೆ ಮಾಡಲು ಜೊತೆಯಾದ ಇಬ್ಬರು ಸರ್ಕಾರವನ್ನು ಜೊತೆಯಾಗಿಯೇ ಮುನ್ನಡೆಸುತ್ತಿದ್ದಾರೆ. ಇದೀಗ ಮಾಜಿ ಸಚಿವ ಆರ್ ಅಶೋಕ್ ಅವರು ಕಾಂಗ್ರೆಸ್ ಸರ್ಕಾರವನ್ನು ಗೇಲಿ ಮಾಡಿದ್ದಾರೆ.
ಇದು ಕಾಂಗ್ರೆಸ್ ಸರ್ಕಾರವಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಮ್ಮಿಶ್ರ ಸರ್ಕಾರ.ನಾನು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸಿಎಂ ಇದ್ದಾಗ ಯಾರು ಮಾತನಾಡಲ್ಲ. ಆದರೆ ಸಿದ್ದರಾಮಯ್ಯ ಆದ ಮೇಲೆ ನಾನು ಮಾತನಾಡಬೇಕು ಎಂಬ ಚಾಳಿ ಡಿಕೆ ಶಿವಕುಮಾರ್ ಅವರಿಗೆ ಇದೆ.
ಸಂವಿಧಾನಿಕವಾಗಿ ಉಪಮುಖ್ಯಮಂತ್ರಿ ಹುದ್ದೆ ಇಲ್ಲ. ಆದರೆ ಇದನ್ನು ಪಕ್ಷಗಳು ನಡೆಸಿಕೊಂಡು ಬಂದಿವೆ. ಸಿದ್ದರಾಮಯ್ಯ ಅವರು ಅದ್ಯಾಕೋ ಮೌನಕ್ಕೆ ಶರಣಾಗಿದ್ದಾರೆ. ಕಾಂಗ್ರೆಸ್ ನವರ ದಬ್ಬಾಳಿಕೆಯನ್ನು ಜನ ಸಹಿಸುವುದಿಲ್ಲ. ಮೊದಲ ಸಭೆಯಲ್ಲಿಯೇ ಡಿಕೆ ಶಿವಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಕಾಂಗ್ರೆಸ್ ಎಂದರೆ ಗುಂಡಾಗಿರಿ, ಗುಂಡಾಗಿರಿ ಎಂದರೆ ಕಾಂಗ್ರೆಸ್. ಪ್ರತಿ ಸರ್ಕಾರ ಬಂದಾಗಲೂ ಅದೇ ಅಧಿಕಾರಿಗಳು ಇರುತ್ತಾರೆ. ಧಮ್ಕಿ ಹಾಕುವ ಅವಶ್ಯಕತೆ ಇಲ್ಲ ಎಂದಿದ್ದಾರೆ.