ಬೆಂಗಳೂರು: ಕಳೆದ ಎರಡು ದಿನದಿಂದ ರಾಜ್ಯ ರಾಜಕೀಯ ವಲಯದಲ್ಲಿ ಆಗಸ್ಟ್ – ಸೆಪ್ಟೆಂಬರ್ ಕ್ರಾಂತಿಯದ್ದೇ ಚರ್ಚೆ. ಸಚಿವ ರಾಜಣ್ಣ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಮಾತಾಡಿದಾಗಿನಿಂದ ಜೋರು ಚರ್ಚೆ ನಡೆಯುತ್ತಿದೆ. ಇದೀಗ ಆ ಸೆಪ್ಟೆಂಬರ್ ಕ್ರಾಂತಿಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದ್ದು, ಇದೇ ವರ್ಷ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಮಾತು ಇದೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದು ಡಿಕೆ ಶಿವಕುಮಾರ್ ಅವರು ಮುಂದಿನ ಸಿಎಂ ಆಗಲಿದ್ದಾರೆ ಅಂತ ರಾಜಕೀಯ ನಾಯಕರೇ ಭವಿಷ್ಯ ನುಡಿಯುತ್ತಿದ್ದಾರೆ ಎಂದು ಸೆಪ್ಟೆಂಬರ್ ಕ್ರಾಂತಿ ಬಗ್ಗೆ ತಿರುಗೇಟು ನೀಡಿದ್ದಾರೆ.
ಇದೆ ವೇಳೆ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಆರ್ ಅಶೋಕ್, ಆರ್ ಎಸ್ ಎಸ್ ನಂತಹ ಒಂದು ಅಪ್ಪಟ ರಾಷ್ಟ್ರೀಯವಾದಿ, ನಿಸ್ವಾರ್ಥ ಸಂಘಟನೆ ಬಗ್ಗೆ ಮಾತನಾಡುವ ನೈತಿಕತೆಯಾಗಲಿ, ವಿಶ್ವಾಸಾರ್ಹತೆಯಾಗಲಿ ನಿಮಗರ ಇಲ್ಲ. ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನೇ ಬಂಧೀಖಾನರ ಮಾಡಿದ ಕಾಂಗ್ರೆಸ್ ಪಕ್ಷದಿಂದ ಆರ್ ಎಸ್ ಎಸ್ ಅಥವಾ ಬಿಜೆಪಿ ಸಂವಿಧಾನದ ಪಾಠ ಕಲಿಯಬೇಕಾಗಿಲ್ಲ.
ಆರ್ ಎಸ್ ಎಸ್ ಅನ್ನು ಬೈದರೆ, ನಿಂದಿಸಿದರೆ ಹಾಗೂ ಟೀಕೆ ಮಾಡಿದರೆ ನಿಮ್ಮ ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸಿ,ಇನ್ನೊಂದಷ್ಟು ದಿನ ಕುರ್ಚಿಗೆ ಅಂಟಿಕೊಂಡಿರಬಹುದು ಎನ್ನುವ ಭ್ರಮೆಯಿಂದ ಈ ಕೂಡಲೇ ಹೊರಗೆ ಬನ್ನಿ. ಆಗಸ್ಟ್ – ಸೆಪ್ಟೆಂಬರ್ ಕ್ರಾಂತಿಯ ಬಗ್ಗರ ಈಗಾಗಲೇ ನಿಮ್ಮ ಪಕ್ಷದ ಶಾಸಕರೇ ಮಾತನಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.






