ವಿಧಾನಸಭೆ; ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡುತ್ತಾ, ನಮ್ಮ ರಾಷ್ಟ್ರೀಯ ಅಧ್ಯಕ್ಷ ಖರ್ಗೆಯವರ ಎಂದಾಕ್ಷಣಾ ಅಲ್ಲಿದ್ದವರು ನಿಮ್ಮ ರಾಷ್ಟ್ರೀಯ ಅಲ್ಲ ನಮ್ಮ ರಾಷ್ಟ್ರೀಯ ಎಂದು ಕರೆಕ್ಷನ್ ಮಾಡಿದರು. ಜಮೀರ್ ಅವರು ಅಶೋಕ್ ಸರ್ ಯಾವಾಗ ಕಾಂಗ್ರೆಸ್ ಬಂದ್ರಿ ಎಂದು ಕೇಳಿದ್ದಾರೆ. ಬಳಿಕ ಮಾತು ಮುಂದುವರೆಸಿದ ನಮ್ಮ ಜ್ಹಡ್, ಎ ಯಿಂದ ಜಡ್ ಆಗ್ಬಿಟ್ಟವ್ರೆ. ಅವರು ಜನತಾದಳ ಎಲ್ಲಾ ಈಗ ಕಾಂಗ್ರೆಸ್ ಗೆ ಬಂದವ್ರೆ.

ಖರ್ಗೆಯವರನ್ನ ನಮ್ಮವರು ಅಂತ ಯಾಕೆ ಹೇಳಿದ್ದು ಅಂದ್ರೆ ನಾನು ಆಗ ಹೆಲ್ತ್ ಅಥವಾ ಟ್ರಾನ್ಸ್‌ಪೋರ್ಟ್ ಮಿನಿಸ್ಟರ್ ಆಗಿದ್ದೆ. ವಿಧಾನಸೌಧದಲ್ಲಿ ಇದ್ದೆ. ಖರ್ಗೆಯವರು ವಿರೋಧ ಪಕ್ಷದ ನಾಯಕರು. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಮನೆಗೆ ಹೋಗಿದ್ದಾರೆ. ಸದಾಶಿವನಗರ ಮನೆಗೆ ಹೋಗಿದ್ದಾರೆ. ಅವತ್ತು ಅವರ ನನ್ನ ಹುಟ್ಟುಹಬ್ಬ. ಇಲ್ಲಿಂದ ಮನೆಯವರೆಗೂ ಹಾಕಿಕೊಂಡು ಹೋಗಿದ್ದಾರೆ. ದೊಡ್ಡ ಫ್ಲೆಕ್ಸ್ ಒಂದು ಬಿದ್ದೋಗಿದೆ. ಖರ್ಗೆ ಅವರ ಬಗ್ಗೆ ಮಾತಾಡ್ತಾ ಇದ್ದೀನಿ. ಗುಣಕ್ಕೆ ಮತ್ಸರ ಇಲ್ಲ. ಅನ್ನ ಕೊಟ್ಟವನಿಗೆ ಅನ್ನ ಕೊಟ್ಟ ಅಂತಾರೆ. ಬೆನ್ನಿಗೆ ಚೂರಿ ಹಾಕಿದವನನ್ನ ಬೆನ್ನಿಗೆ ಚೂರಿ ಹಾಕಿದ ಅಂತ ಹೇಳಿಯೇ ಹೇಳ್ತಾರೆ.

ಅವರು ಗಾಡಿ ನಿಲ್ಲಿಸಿ, ಅವರ ಡ್ರೈವರ್ ಕೈನಲ್ಲಿ ಕಂಬಕ್ಕೆ ಕಟ್ಟಿಸಿ ನಂಗೆ ಫೋನ್ ಮಾಡಿದ್ರು. ಏನಪ್ಪ ಇವತ್ತು ಬರ್ತ್ ಡೇಯಂತೆ. ನೋಡಪ್ಪ ನಿನ್ನ ಫ್ಲೆಕ್ಸ್ ಬಿದ್ದೋಗಿತ್ತು ಕಟ್ಟಿಸಿದ್ದೀನಿ. ಅದಕ್ಕೋಸ್ಕರ ನಮ್ನದು ಅಂತ ಹೇಳಿದ್ದು ಅರ್ಥ ಆಯ್ತಾ. ಅದರಲ್ಲಿ ತಪ್ಪೇನಿದೆ. ಒಳ್ಳೆಯದು ಮಾಡಿದಾಗ ಹೇಳಲೇಬೇಕಲ್ಲ. ಖರ್ಗೆಯವರಿಗೆ ಪ್ರಧಾನಿ ಮೋದಿಯವರೇ ಗೌರವ ಕೊಡ್ತಾರೆ ಎಂದು ಸದನದಲ್ಲಿ ಹೇಳಿದ್ದಾರೆ.

