ಸುದ್ದಿಒನ್, ಚಿತ್ರದುರ್ಗ ನ. 23 : ಇತಿಹಾಸ ವೇದಿಕೆ ಮತ್ತು ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಇದರ ಸಂಯುಕ್ತಾಶ್ರಯದಲ್ಲಿ ಪ್ರಶ್ನೆ ಪತ್ರಿಕೆ ಮತ್ತು ನೀಲ ನಕ್ಷೆ ತಯಾರಿಸುವ ಕಾರ್ಯಾಗಾರವೂ ನವೆಂಬರ್ 24 ರ ಶುಕ್ರವಾರ ನಗರದ ಸಿ.ಎನ್.ಸಿ.(ಚಿನ್ಮೂಲಾದ್ರಿ) ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿ.ಎನ್.ಸಿ.(ಚಿನ್ಮೂಲಾದ್ರಿ) ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜು ತಿಳಿಸಿದ್ದಾರೆ.
ಕಾರ್ಯಗಾರವನ್ನು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪ ನಿರ್ದೇಶಕರಾದ ಪುಟ್ಟಸ್ವಾಮಿ ಆರ್ ಉದ್ಘಾಟಿಸಲಿದ್ದಾರೆ. ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ರಂಗಪ್ಪ ಎಲ್, ಕಾರ್ಯದರ್ಶಿ ನಾಗರಾಜ್ ಕೆ. ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಮಲ್ಲೇಶಪ್ಪ ಬಿ.ಆರ್. ಇತಿಹಾಸ ವೇದಿಕೆಯ ಗೌರವಾಧ್ಯಕ್ಷರಾದ ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಆರ್. ಮುಸ್ತಪ, ಕಾರ್ಯಾದ್ಯಕ್ಷರಾದ ಎಂ.ಶ್ರೀನಿವಾಸ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇತಿಹಾಸ ವೇದಿಕೆಯ ಅಧ್ಯಕ್ಷರಾದ ಜಿ.ಎಸ್.ತಿಪ್ಪೇಸ್ವಾಮಿ ವಹಿಸಲಿದ್ದಾರೆ.
ತುಮಕೂರಿನ ಶಿರಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ತಿಮ್ಮರಾಜು ಪ್ರಶ್ನೆ ಪತ್ರಿಕೆ ಮತ್ತು ನೀಲನಕ್ಷೆ ತಯಾರಿಕೆಯ ಬಗ್ಗೆ ತಿಳಿಸಿ ಕೊಡಲಿದ್ದಾರೆ.