ಪುರಾಣ, ಮಹಾಕಾವ್ಯಗಳ ಸಾರವನ್ನು ಸಮಗ್ರವಾಗಿ ಹಿಡಿದಿಡುವ ಹೊಸ ಪ್ರಯತ್ನವೇ ಪುರಾಣ ಕನ್ಯೆ ಕಾದಂಬರಿ : ಡಾ.ಲೋಕೇಶ ಅಗಸನಕಟ್ಟೆ ಅಭಿಪ್ರಾಯ

ಚಿತ್ರದುರ್ಗ, (ಜನವರಿ.09): ದೇಸಿಯ ಚಿಂತನೆಗಳನ್ನು ಆಧುನಿಕೋತ್ತರ ಚಿಂತನೆಗಳ ನೆಲೆಗಳಲ್ಲಿ ಕಟ್ಟಿದ ಹಾಗೂ 18 ಮಹಾ ಪುರಾಣಗಳ ಮತ್ತು ಮಹಾಕಾವ್ಯಗಳ ಸಾರವನ್ನು ಸಮಗ್ರವಾಗಿ ಹಿಡಿದಿಡುವ ಒಂದು ಹೊಸ ಪ್ರಯತ್ನವನ್ನು  ಕಾ.ತ.ಚಿಕ್ಕಣ್ಣ ಅವರು “ಪುರಾಣ ಕನ್ಯೆ” ಕಾದಂಬರಿಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಲೋಕೇಶ ಅಗಸನಕಟ್ಟೆ ಹೇಳಿದರು.

ತಾಲ್ಲೂಕಿನ ಗುಡ್ಡದ ರಂಗವ್ವನಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಲಯ ಜ್ಞಾನಗಂಗೋತ್ರಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜ್ಞಾನ ಗಂಗೋತ್ರಿ ಸಭಾಂಗಣದಲ್ಲಿ ಈಚೆಗೆ ದಾವಣಗೆರೆ ವಿಶ್ವವಿದ್ಯಾನಿಲಯ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಹಿರಿಯೂರಿನ ಬುಡಕಟ್ಟು ಸಂಸ್ಕøತಿ ಅಧ್ಯಯನ ಹಾಗೂ ಅಭಿವೃದ್ಧಿ ಸಂಸ್ಥೆತಯ ಸಹಯೋಗದಲ್ಲಿ “ಕಾ.ತ.ಚಿಕ್ಕಣ್ಣನವರ ಪುರಾಣ ಕನ್ಯೆ ಒಂದು ಅವಲೋಕನ” ಕುರಿತು ಆಧುನಿಕೋತ್ತರ ಚಿಂತನೆಯ ನೆಲೆಯಲ್ಲಿ ಪುರಾಣ ಕತ್ಯೆ ವಿಷಯ ಕುರಿತು ವಿಷಯ ಮಂಡನೆ ಮಾಡಿದರು.

ಕನ್ನಡ ಕಾದಂಬರಿ ಸಾಹಿತ್ಯದ ಚರಿತ್ರೆಯಲ್ಲಿ ಹೀಗೆ ಹೊಸ ಪ್ರಯೋಗಶೀಲತೆಗಳನ್ನು ಮೇಲಿಂದ ಮೇಲೆ ಕಾಣುತ್ತಿದ್ದೇವೆ. ಆ ಬಗೆಯ ಪ್ರಯೋಗಶೀಲತೆಯು ಕನ್ನಡ ಕಾದಂಬರಿಗಳ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳಿವೆ. ಅದರಲ್ಲಿ ಭಾಷೆ, ವಸ್ತು, ಶೈಲಿಯ ದೃಷ್ಠಿಯಿಂದ ದೇವನೂರು ಮಹಾದೇವ ಅವರು ಕನ್ನಡ ಕಾದಂಬರಿಗೆ  ಹೊಸ ದಾರಿ ಕೊಟ್ಟಂತೆ ಕಾ.ತ.ಚಿಕ್ಕಣ್ಣನವರು ಕೂಡ ಅಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ದಾರಿಯಲ್ಲಿ ಕನ್ನಡ ಕಾದಂಬರಿ ನಡೆದರೆ ದೇಸಿಯ ಪುರಾಣಗಳಿಗೆ, ಜಾನಪದ ಕಥನಗಳಿಗೆ, ಐತಿಹ್ಯಗಳಿಗೆ ವಾಸ್ತವಿಕ ನೆಲೆಯಲ್ಲಿ ಹೊಸ ಅರ್ಥ ಕಲ್ಪಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಜಿ.ವಿಜಯಕುಮಾರ್ ಅವರು, “ಪುರಾಣ ಪ್ರತೀಕಗಳ ಹಿನ್ನಲೆಯಲ್ಲಿ ಪುರಾಣ ಕನ್ಯೆ” ಎಂಬ ವಿಷಯದ ಕುರಿತು ವಿಷಯ ಮಂಡನೆ ಮಾಡಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಹೆಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಜಿ.ಡಿ.ಚಿತ್ತಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ವಿಶ್ವವಿದ್ಯಾನಿಲಯ ಸಹಾಯಕ ಪ್ರಾಧ್ಯಾಪಕ ಮದಕರಿ ನಾಯಕ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!