ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆ ಅನೌನ್ಸ್ ಆಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಈ ಬಾರಿಯೂ ಅಧಿಕಾರ ಹಿಡಿಯಬೇಕೆಂದು ಪಣತೊಟ್ಟಿದೆ. ಹೀಗಾಗಿ ದಲಿತ ಮತಗಳನ್ನ ಸೆಳೆಯಲು ಫ್ಲ್ಯಾನ್ ಮಾಡಿಕೊಂಡಿದೆ. ಈ ಹಿನ್ನೆಲೆ ಪಂಜಾಬ್ ಸಿಎಂ ಚರಣ್ ಸಿಂಗ್ ಚೆನ್ನಿ ಅವರು ಎರಡು ಸ್ಥಾನಗಳಿಗೆ ಸ್ಪರ್ಧಿಸುವ ಸಿದ್ಧತೆಯಲ್ಲಿದ್ದಾರೆ.
ಈಗಾಗಲೇ 70 ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಯೋಜನೆ ರೂಪಿಸಲಾಗಿದೆ. ಸಭೆಯಲ್ಲಿ ಸಿಎಂ ಚರಣ್ ಸಿಂಗ್ ಚನ್ನಿ ಸ್ಪರ್ಧೆಯ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಈ ಬಾರಿ ದಲಿತರು ಹೆಚ್ಚಾಗಿರುವ ಕ್ಷೇತ್ರಕ್ಕೆ ಚನ್ನಿಯನ್ನ ಸ್ಪರ್ಧೆಗಿಳಿಸುವ ಯೋಜನೆ ನಡೆದಿದೆ. ದೋಬಾ ಪ್ರದೇಶದಲ್ಲಿ ಬರುವ ಆದಂಪುರ ಪ್ರದೇಶದಿಂದ ಕಣಕ್ಕಿಳಿಸಲು ಚಿಂತಿಸಲಾಗಿದೆ. ಈ ಬಾರಿ ಗೆಲುವಿಗಾಗಿ ಸಾಕಷ್ಟು ಶ್ರಮ ಹಾಕುತ್ತಿದೆ ಎನ್ನಲಾಗಿದೆ.
ಫೆಬ್ರವರಿ 10 ರಿಂದ ಪಂಚರಾಜ್ಯಗಳ ಚುನಾವಣೆ ನಡೆಯಲಿದೆ. ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಕೊರೊನಾ ಹೆಚ್ಚಳದ ಭಯದಿಂದ ಯಾವುದೇ ರೀತಿಯ ಅದ್ದೂರಿ ಪ್ರಚಾರಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ಡೋರ್ ಟು ಡೋರ್ ಪ್ರಚಾರಕ್ಕಷ್ಟೇ ಅನುಮತಿ ನೀಡಿದೆ.