ಬೆಂಗಳೂರು: ಅಪ್ಪನ ಹಾದಿಯಲ್ಲೆ ನಡೆಯೋದನ್ನ ಅಪ್ಪು ಕೊನೆವರೆಗೂ ಮರೆಯಲೇ ಇಲ್ಲ. ನಡತೆಯಲ್ಲಾಗಲೀ, ಗುಣದಲ್ಲಾಗಲೀ ಅಪ್ಪನಷ್ಟೇ ಸಭ್ಯತೆ, ಅಪ್ಪನಷ್ಟೇ ಗುಣವಂತ. ಕಡೆಗೆ ನೇತ್ರದಾನದಲ್ಲೂ ಅಪ್ಪನ ಹಾದಿಯನ್ನೇ ಅನುಕರಿಸಿದ್ರು. ಅಪ್ಪು ನಾಲ್ಕು ಜನರ ಅಂಧರ ಬಾಳಿಕೆ ಬೆಳಕಾಗಿದ್ದಾರೆ. ಪುನೀತ್ ನಿಧನದ ಬಳಿಕ ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅದರಂತೆ ನಾಲ್ಕು ಜನ ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಈ ಬಗ್ಗೆ ನೇತ್ರಾಲಯದ ಮುಖ್ಯಸ್ಥ ಭುಜಂಗ್ ಶೆಟ್ಟಿ ಮಾಹಿತಿ ನೀಡಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳಾಗಿವೆ. ಆ ಆವಿಷ್ಕಾರಗಳನ್ನ ಬಳಸಿಕೊಂಡು ಅಪ್ಪು ಕಣ್ಣುಗಳನ್ನು ನಾಲ್ವರಿಗೆ ನೀಡಲಾಗಿದೆ ಎಂದಿದ್ದಾರೆ. ಸಾಮಾನ್ಯವಾಗಿ ಒಬ್ಬರ ಕಣ್ಣುಗಳನ್ನ ಇಬ್ಬರಿಗಷ್ಟೇ ಅಳವಡಿಸಬಹುದು. ಆದರೆ ನವೀನ ಆವಿಷ್ಕಾರದೊಂದಿಗೆ ನಾಲ್ವರಿಗೆ ಜೋಡಿಸಲಾಗಿದೆ ಎಂದಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ ಸಾಧನೆ ಮಾಡಲಾಗಿದೆ. ನಾಲ್ವರಿಗೂ ಯಶಸ್ವಿ ಶಸ್ತ್ರ ಚಿಕಿತ್ಸೆಯಾಗಿದೆ. ಈ ಮೂಲಕ ಪುನೀತ್ ಅವರ ಕಣ್ಣನ್ನು ನಾಲ್ವರಿಗೆ ನೀಡಲಾಗಿದೆ.