ಬೆಂಗಳೂರು: ಅಪ್ಪು ನಿಧನ ಇಡೀ ಕರ್ನಾಟಕ ಜನತೆಯನ್ನ ಕಂಗೆಡೆಸಿದೆ. ನಿನ್ನೆಯಿಂದ ಯಾರಲ್ಲೂ ನೆಮ್ಮದಿಯಿಲ್ಲದಂತಾಗಿದೆ. ಎಷ್ಟೇ ಪ್ರಯತ್ನ ಪಟ್ಟರು ಅಪ್ಪು ಸಾವನ್ನ ಸ್ವೀಕರಿಸೋದಕ್ಕೆ ಆಗ್ತಾ ಇಲ್ಲ. ಆ ನೋವಿನಲ್ಲೆ ಎಲ್ಲರೂ ಅಪ್ಪು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಚಿತ್ರರಂಗದವರು, ಅಭಿಮಾನಿಗಳು ಪುನೀತ್ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಭಿಮಾನಿಗಳತ್ತು ಸಾಗರದಂತೆ ಹರಿದು ಬರುತ್ತಿದ್ದಾರೆ. ನಾಳೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿವೆ.

ನಟಿ ರಮ್ಯಾ ಪುನೀತ್ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ. ಈ ವೇಳೆ ತಮ್ಮ ಹಾಗೂ ಪುನೀತ್ ನಡುವಿನ ಸ್ನೇಹದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. ಅಪ್ಪು ನನಗೆ ಆತ್ಮೀಯ ಗೆಳೆಯ. ಫ್ಯಾಮಿಲಿ ಸದಸ್ಯರಾಗಿದ್ದರು. ಕಳೆದ ಮೂರು ವಾರಗಳ ಹಿಂದಷ್ಟೇ ಅವರೊಟ್ಟಿಗೆ ಮಾತನಾಡಿದ್ದೇನು. ಆದ್ರೆ ಇಉಗ ಅವರೇ ಇಲ್ಲ ಅಂದ್ರೆ ನಂಬೋದಕ್ಕೆ ಸಾಧ್ಯವಾಗ್ತಾ ಇಲ್ಲ ಎಂದಿದ್ದಾರೆ.


