ಚಿತ್ರದುರ್ಗದಲ್ಲಿ ಜೇಮ್ಸ್ ಜಾತ್ರೆ ; ಪುನೀತ್ ರಾಜಕುಮಾರ್ ಹುಟ್ಟು ಹಬ್ಬ, ಅಭಿಮಾನಿಗಳಿಂದ ಅನ್ನ ಸಂತರ್ಪಣೆ

suddionenews
1 Min Read

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ,(ಮಾ.17) :  ದಿ. ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬ ಹಾಗೂ ಅವರ ಚಿತ್ರ ಜೇಮ್ಸ್ ಬಿಡುಗಡೆಯ ಹಿನ್ನಲೆಯಲ್ಲಿ ಇಂದು ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.

ಪುನೀತ್ ರವರ ಅಭಿಮಾನಿಗಳು ಅವರ ಹುಟ್ಟು ಹಬ್ಬದ ಅಂಗವಾಗಿ ದೊಡ್ಡದಾದ ಕೇಕ್‍ನ್ನು ತರಿಸಿ ಅದನ್ನು ಕತ್ತರಿಸುವುದರ ಮೂಲಕ ಪುನೀತ್‍ರವರ ಹುಟ್ಟುಹಬ್ಬವನ್ನು ಅಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಪುನೀತ್‍ರವರು ಹಟ್ಟು ಹಬ್ಬದ ಅಂಗವಾಗಿ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಸಮಿತಿವತಿಯಿಂದ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ಚಿತ್ರವನ್ನು ವೀಕ್ಷಿಸಲು ಬಂದವರು ಹಾಗೂ ಇತರರಿಗೆ ಅನ್ನ ದಾಸೋಹವನ್ನು ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆಯ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಅಹಮ್ಮದ್ ಮಹಮ್ಮದ್ ಪಾಷ (ಸರ್ದಾರ್) ಪುನೀತ್ ರವರು ತಾವು ಮಾಡಿದ ಕೆಲಸವನ್ನು ಬೇರೆಯವರ ಬಳಿ ಹೇಳಿಕೊಳ್ಳುತ್ತಿರಲಿಲ್ಲ. ಬಲಗೈಯಿಂದ ನೀಡಿದ್ದು ಎಡಗೈಗೆ ಗೊತ್ತಾಗಬಾರದೆಂದು ಅದು ಕೊಂಡಿದ್ದರು ಅದೇ ರೀತಿ ಸಹಾ ತಮ್ಮ ಜೀವನದಲ್ಲಿ ನಡೆದಿದ್ದರು ಅವರು ಮೃತ ಪಟ್ಟ ಮೇಲೆಯೇ ಅವರು ಮಾಡುತ್ತಿದ್ದ ಹಲವಾರು ಕೆಲಸಗಳು ಬೇರೆಯವರಿಗೆ ಗೊತ್ತಾಗಿವೆ. ಅದೇ ರೀತಿ ತಮ್ಮ ಜೀವನದಲ್ಲಿಯೂ ಸಹಾ ಬದುಲಿ ತೋರಿಸಿದ್ದಾರೆ. ಅವರ ಒಂದು ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಈ ಸಮಯದಲ್ಲಿ ಪ್ರಸನ್ನ ಚಿತ್ರಮಂದಿರದ ಮಾಲಿಕರಾದ ಪ್ರಸನ್ನ, ಅಪ್ಪು ಅಭೀಮಾನಿಗಳಾದ ಅರುಣ್ ಕುಮಾರ್, ನಗರಸಭಾ ಸದಸ್ಯರಾದ ಫ್ರಕೃದ್ದೀನ್, ಸಾದತ್, ಬ್ಯಾಂಕ್ ಪರಮೇಶಿ, ಬಾಬು, ಶ್ರೀನಿವಾಸ್, ಜ್ಯೋತಿ, ತಮ್ಮಣ್ಣ, ಇಂತಿಯಾಜ್, ಯಲ್ಲಪ್ಪ ರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *