Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಪುನೀತ್ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದ ಅಭಿಮಾನಿಗಳು

Facebook
Twitter
Telegram
WhatsApp

 

ಚಿತ್ರದುರ್ಗ, (ಅ.28) : ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸಿರುವ ಎನ್ನುವುದಕ್ಕಿಂತ ಜೀವಿಸಿರುವ ಚಿತ್ರ ಗಂಧದ ಗುಡಿ ಇಂದು ಎಲ್ಲೆಡೆ ತೆರೆಕಂಡಿದೆ. ಅಪ್ಪು ಇಲ್ಲ ಎಂಬ ನೋವಿಗೆ ಒಂದು ದಿನ ಕಳೆದರೆ ಒಂದು ವರ್ಷವೇ ಆಗಿ ಹೋಗುತ್ತೆ. ಜೊತೆಗೆ ಇದು ಅವರ ಕೊನೆಯ ಚಿತ್ರ ಎಂಬ ದುಃಖವೂ ಅಭಿಮಾನಿಗಳಲ್ಲಿದ್ದು, ಅಪ್ಪು ಕಣ್ತುಂಬಿಕೊಳ್ಳಲು ಥಿಯೇಟರ್ ಮುಂದೆ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಜಮಾಯಿಸಿದ್ದಾರೆ. ಇನ್ನು ಅಪ್ಪು ಇದ್ದಾಗ ಅವರ ಸಿ‌ನಿಮಾಗಳನ್ನು ಅದೆಷ್ಟು ಸೆಲೆಬ್ರೇಟ್ ಮಾಡುತ್ತಿದ್ದರೋ ಈಗಲೂ ಅಷ್ಟೇ ಸೆಲೆಬ್ರೇಟ್ ಮಾಡಿದ್ದಾರೆ.

ಚಿತ್ರದುರ್ಗದಲ್ಲೂ ಅಪ್ಪು ಅಭಿನಯದ ಗಂಧದ ಗುಡಿ ತೆರೆಕಂಡಿದೆ. ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಪುನೀತ್ ಕಟೌಟ್ ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ಮತ್ತೊಂದು ಕಡೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದಲ್ಲದೇ ಚಿತ್ರಮಂದಿರ ಆವರಣದಲ್ಲಿ ಅಭಿಮಾನಿಗಳು ಫ್ಲೆಕ್ಸ್ ಹಾಕಿ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿ ಖುಷಿಪಟ್ಟರು. ಚಿತ್ರಮಂದಿರದಲ್ಲಿ ಬೆಳಗ್ಗೆ 7ಗಂಟೆಗೆ ಮೊದಲ ಶೋ ಪ್ರಾರಂಭವಾಗಿದ್ದು, ಎಲ್ಲಾ ಟಿಕೆಟ್ ಮಾರಟವಾಗಿವೆ. ಚಳ್ಳಕೆರೆ ನಗರದಲ್ಲೂ ಬೆಳಿಗ್ಗೆ 6.30 ಸುಮಾರಿಗೆ ಚಿತ್ರ ಆರಂಭವಾಗಿದೆ.

ಜಿಲ್ಲೆಯ ವಿವಿಧ ತಾಲ್ಲೂಕಿನ ಚಿತ್ರಮಂದಿಗಳನ್ನು ಸಿಂಗರಿಸಿದ್ದು, ಅಪ್ಪು ಕಟೌಟ್​ಗಳಿಗೆ ಪೂಜೆ, ಹಾಲಿನ ಅಭಿಷೇಕ ಮಾಡಿದ್ದಾರೆ. ಪುನೀತ್​ಗೆ ಜೈಕಾರ ಕೂಗುತ್ತಾ ಎಲ್ಲರೂ ಗಂಧದಗುಡಿ ಸಿನಿಮಾವನ್ನು ತಪ್ಪದೇ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ಸುಮಾರು 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪರದೆಯ ಮೇಲೆ ಕಾಣಿಸಿಕೊಂಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ : ಡಿಕೆ ಶಿವಕುಮಾರ್ ಹೇಳಿದ್ದೇನು..?

ಮುರುಡೇಶ್ವರ: ರಾಜ್ಯದ ಉಪಚುನಾವಣೆ, ಮಹಾರಾಷ್ಟ್ರ ಎಲೆಕ್ಷನ್ ಮುಗಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೆ ಬಿಜಚ್ ಕಡೆಗೆ ಹೋಗಿದ್ದಾರೆ. ಮುರುಡೇಶ್ವರ ಬೀಚಗ ಸದ್ದಿನಲ್ಲಿ ಕೂತು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇದೇ ವೇಳೆ ಸಂಪುಟ

ವಕ್ಫ್ ವಿರುದ್ದ ನವೆಂಬರ್ 25 ರಂದು ಭಾರತೀಯ ಕಿಸಾನ್ ಸಂಘದಿಂದ ಬೃಹತ್ ಹೋರಾಟ : ಕರಿಕೆರೆ ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಭಾರತೀಯ ಕಿಸಾನ್ ಸಂಘದ ವತಿಯಿಂದ ವಕ್ಫ್ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ

ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ : ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಪಿ.ರವೀಂದ್ರ

ಚಿತ್ರದುರ್ಗ. ನ.22: ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.   ಜಿಲ್ಲಾಸ್ಪತ್ರೆಗೆ ಬರುವಾಗ ರೋಗಿಗಳು ತಪ್ಪದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು

error: Content is protected !!