ಚಿತ್ರದುರ್ಗ, ಸುದ್ದಿಒನ್ ನ್ಯೂಸ್, (ಏ.21) : ನಗರದ ಸಿಎನ್‍ಸಿ ಪಿಯು ಕಾಲೇಜಿಗೆ 2023ನೇ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದ PCMB ಸಂಯೋಜನೆಯಲ್ಲಿ ಒಟ್ಟು 108 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ ಡಿಸ್ಟಿಂಕ್ಷನ್-41 ವಿದ್ಯಾರ್ಥಿಗಳು ಹಾಗೂ ಪ್ರಥಮ ದರ್ಜೆಯಲ್ಲಿ-46ವಿದ್ಯಾರ್ಥಿಗಳು ಹಾಗೂ ದ್ವಿತೀಯ ದರ್ಜೆಯಲ್ಲಿ-18 ವಿದ್ಯಾರ್ಥಿಗಳು.
ರೇಣುಕವೈಶಾಲಿ.ಹೆಚ್, 583 [97.16%]
ಪೂರ್ವಿಕ.ಎನ್, 576 [96]
ಚೈತ್ರ.ಎನ್, 575[95.83%] ಅಂಕಗಳನ್ನು ಪಡೆದು ತೇರ್ಗಡೆಯಾಗಿರುತ್ತಾರೆ.
ವಾಣಿಜ್ಯ ವಿಭಾಗದ ಸಂಯೋಜನೆಯಲ್ಲಿ ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ ಡಿಸ್ಟಿಂಕ್ಷನ್-11 ವಿದ್ಯಾರ್ಥಿಗಳು ಹಾಗೂ ಪ್ರಥಮ ದರ್ಜೆಯಲ್ಲಿ-20 ವಿದ್ಯಾರ್ಥಿಗಳು ಹಾಗೂ ದ್ವಿತೀಯ ದರ್ಜೆಯಲ್ಲಿ-05 ವಿದ್ಯಾರ್ಥಿಗಳು
ಸಿಂಧೂ.ವಿ, 573 [95.5] ವೈಷ್ಣವಿ.ಆರ್, 551 [91.83]
ರಾಜೇಶ್ವರಿ.ಎನ್. 547 [91.16]
ಅಂಕಗಳನ್ನು ಪಡೆದು ತೇರ್ಗಡೆಯಾಗಿರುತ್ತಾರೆ.
ಈ ವರ್ಷದ ಫಲಿತಾಂಶ ಉತ್ತಮವಾಗಿ ಬಂದಿದ್ದು, ವಿದ್ಯಾರ್ಥಿಗಳ ಈ ಸಾಧನೆಗೆ ಸಿಎನ್‍ಸಿ ಪಿಯು ಕಾಲೇಜಿನ ಡೀನ್ ಆಗಿರುವ ಡಾ.ಗೋಪಾಲ್ ಹಾಗೂ ಪ್ರಾಂಶುಪಾಲರಾದ ಬಿ.ನಾಗರಾಜ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರು ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.