ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಾವಿರಾರು ಆಟೋಗಳಲ್ಲಿ ಪ್ರಚಾರ : ಎಂ. ಸಿ. ರಘುಚಂದನ್

2 Min Read

ವರದಿ ಮತ್ತು ಫೋಟೋ ಕೃಪೆ
                        ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 10 : ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಸಾವಿರ ಆಟೋಗಳಲ್ಲಿ  ಕೇಂದ್ರ ಸರ್ಕಾರ ಯೋಜನೆಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಚಿತ್ರದುರ್ಗ ಲೋಕಸಭಾ ಬಿಜೆಪಿ ಟಿಕೆಟ್  ಆಕಾಂಕ್ಷಿ ಎಂ ಸಿ ರಘುಚಂದನ್ ಹೇಳಿದರು.

ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಅವರು, ಯಾಕೆ ಪ್ರಧಾನಿ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ತಿಳಿಸುವ ಬ್ಯಾನರ್ ಪ್ರಿಂಟ್ ಮಾಡಿಸಿ ಆಟೋಗಳಿಗೆ ಅಂಟಿಸಿ ಪ್ರಚಾರ ಮಾಡಲಾಗುತ್ತದೆ. ಇದು ಇಡೀ ಭಾರತದಲ್ಲಿ ಮೊಟ್ಟ ಮೊದಲ ಕಾರ್ಯಕ್ರಮವಾಗಿದೆ.

ಚಿತ್ರದುರ್ಗದಲ್ಲಿ ಪ್ರಾಯೋಗಿಕವಾಗಿ 150 ಆಟೋಗಳಿಗೆ ಚಾಲನೆ ನೀಡಲಾಗುತ್ತಿದ್ದು, ಲೋಕಸಭಾ ವ್ಯಾಪ್ತಿಯಲ್ಲಿ ಆಯಾ ತಾಲೂಕಿನಲ್ಲಿ ಆಟೋಗಳ ಸಂಖ್ಯೆ ಆಧಾರಿಸಿ ಆಟೋಗಳಿಗೆ ಅಂಟಿಸಿ ಪ್ರಚಾರ ಮಾಡಲಾಗುತ್ತದೆ. ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು ಎಂಬ ನಿಟ್ಟಿನಲ್ಲಿ ಈ ಕೆಲಸ ಮಾಡಲಾಗುತ್ತಿದೆ ಎಂದರು ಬ್ಯಾನರ್ ಹಾಕಿಸುವಲ್ಲಿ ಯಾರಿಗೂ ಒತ್ತಡವಿಲ್ಲ. ಸ್ವಯಂ ಪ್ರೇರಿತರಾಗಿ ಈ ಕೆಲಸಕ್ಕೆ ಒಪ್ಪಿದ್ದಾರೆ. ವಾಜಪೇಯಿ ಅವರು ಮಾಡಿದ ಕೆಲಸವನ್ನು ಪ್ರಚಾರ ಪಡೆಯದೆ ಸೋಲು ಕಾಣಲಾಯ್ತು.ಆದರೆ ಈ ಬಾರಿ ಮೋದಿಯವರ ಕೆಲಸಗಳ ಬಗ್ಗೆ ಮನೆ ಮನೆ ಬಾಗಿಲಿಗೆ ಪ್ರಚಾರ ಮಾಡುವ ಮೂಲಕ ಮೋದಿ ಯೋಜನೆಗಳನ್ನು ತಿಳಿಸುವ ಉದ್ದೇಶವಾಗಿದೆ. ಇದು ಕಾನೂನು ಬಾಹಿರ ಎಂದರೆ ಇದನ್ನು ತೆಗೆಸುತ್ತೇವೆ. ಸಮಾಜಕ್ಕೆ ಬಿಜೆಪಿ ಕೊಡುಗೆ ಏನು ಎಂದು ತಿಳಿಸುತ್ತೇವೆ.

ನಾನೊಬ್ಬ ಲೋಕಸಬಾ ಚುನಾವಣೆಯಲ್ಲಿ ಅಕಾಂಕ್ಷಿ ಇದ್ದೇನೆ ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ. ನಮ್ಮ ಪಕ್ಷದಲ್ಲಿ ಏನೇ ಭಿನ್ನಮತವಿದ್ದರೂ ಕೂಡ ಅದನ್ನು ಬಗೆಹರಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಈ ಬಾರಿ ಗೆಲುವು ಸಾಧಿಸುತ್ತೇವೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅನಿತ್‍ಕುಮಾರ್, ಶ್ರೀಮತಿ ರತ್ನಮ್ಮ ಲೋಕನಾಥ್, ಮಲ್ಲಿಕಾರ್ಜನ್,  ವಕ್ತಾರ ನಾಗರಾಜ್ ಬೇದ್ರೇ, ತಿಪ್ಪೇಸ್ವಾಮಿ, ಶ್ರೀಮತಿ ಚಂದ್ರಕಲಾ, ವೆಂಕಟೇಶ್ ಯಾದವ್, ನಗರಸಭಾ ಸದಸ್ಯರಾದ ದೀಪು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *