in

ಸಾರ್ವಜನಿಜರಿಂದ ವಿರೋಧ : ಬೆಂಗಳೂರು – ಮೈಸೂರು ಟೋಲ್ ದರ ಹೆಚ್ಚಳ ಆದೇಶ ವಾಪಾಸ್..!

suddione whatsapp group join

ಬೆಂಗಳೂರು: ಬೆಂಗಳೂರು – ಮೈಸೂರು ದಶಪಥ ರಸ್ತೆ ಉದ್ಘಾಟನೆಯಾಗಿ ಕೆಲವೇ ದಿನಗಳಾಗಿದೆ. ಆದರೆ ಅದಾಗಲೇ ರಾಷ್ಟ್ರೀಯ ಟೋಲ್ ಪ್ರಾಧಿಕಾರ ಟೋಲ್ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿದ ಕೂಡಲೇ ಜನಾಕ್ರೋಶ ವ್ಯಕ್ತವಾಗಿತ್ತು. ಮೊದಲೇ ಟೋಲ್ ದರ ಹೆಚ್ಚಾಗಿದೆ. ಈಗ ಹೆಚ್ಚಳ ಬೇರೆ ಎಂದು ಕಿಡಿಕಾರಿದ್ದರು. ಈ ಬೆನ್ನಲ್ಲೇ ಟೋಲ್ ದರ ಹೆಚ್ಚಳದ ಆದೇಶ ವಾಪಾಸ್ ಪಡೆಯಲಾಗಿದೆ.

NHAI ಟೋಲ್‌ ದರವನ್ನು ಶೇ.22ರಷ್ಟು ಹೆಚ್ಚಳ ಮಾಡಲಾಗಿತ್ತು. ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ‌ ವಾಪಾಸ್ ಪಡೆಯಲಾಗಿದೆ. ಏಪ್ರಿಲ್ 1ರಿಂದ ಈ ಆದೇಶ ಅನ್ವಯವಾಗುವಂತೆ ಇತ್ತು. ಮಧ್ಯರಾತ್ರಿಯಿಂದಾನೇ ಟೋಲ್ ದರ ಹೆಚ್ಚಳವಾಗಿತ್ತು. ಅದರಲ್ಲೂ ಸಿಂಗಲ್‌ ಸೈಡ್ ಹಾಗೂ ಡಬ್ಬಲ್ ಸೈಡ್ ನಲ್ಲೂ ಟೋಲ್ ದರ ಹೆಚ್ಚಳವಾಗಿತ್ತು.

ಕಾರು/ಜೀಪಿನ ಟೋಲ್ ದರ 165 ರೂಪಾಯಿ ಇದೆ. ಈಗ ಮತ್ತೆ 30 ರೂಪಾಯಿ ಹೆಚ್ಚಳವಾಗಿದೆ. ಎರಡು ಕಡೆಗೆ 45 ರೂಪಾಯಿ ಹೆಚ್ಚಳವಾಗಿದೆ. ಟ್ರಕ್/ಬಸ್/ದ್ವಿಚಕ್ರ ವಾಹನದ ದರ 565 ರೂಪಾಯಿ ಇದ. ಈಗ 165 ರೂಪಾಯಿ ಹೆಚ್ಚಳವಾಗಿದೆ. ಲಘು ವಾಹನ/ ಮಿನಿ ಬಸ್ 270 ರೂಪಾಯಿ ಇದೆ. ಈಗ 50 ರೂಪಾಯಿ ಹೆಚ್ಚಳವಾಗಿದೆ. ದ್ವಿಮುಖ ಸಂಚಾರ 75 ರೂಪಾಯಿ ಹೆಚ್ಚಳವಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಈ ರಾಶಿ ಪ್ರೇಮಿಗಳಿಗೆ ಮದುವೆಯ ಸಿಹಿ ಸುದ್ದಿ

ಯಶ್ 19 ಸಿನಿಮಾಗಾಗಿ ಅಭಿಮಾನಿಗಳ ಕಾತರ : ರಾಧಿಕಾ ಹಿಂದೆ ಬಿದ್ದ ಫ್ಯಾನ್ಸ್..!