ಬೆಂಗಳೂರು: ಬಿಜೆಪಿ ಭ್ರಷ್ಟಚಾರದ ವಿರುದ್ಧ ಕಾಂಗ್ರೆಸ್ ಸದಾ ಹೋರಾಟ ನಡೆಸುತ್ತಲೇ ಇದೆ. ಅಭಿಯಾನದ ಮೂಲಕ, ಪ್ರತಿಭಟನೆಯ ಮೂಲಕ ಕಾಂಗ್ರೆಸ್ ಭ್ರಷ್ಟಚಾರವನ್ನು ಖಂಡನೆ ಮಾಡುತ್ತಾ ಇದೆ. ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪನ ಪುತ್ರ ಪ್ರಶಾಂತ್ ಭ್ರಷ್ಟಚಾರ ವಿರುದ್ಧ ನಾಳೆ ಎರಡು ಗಂಟೆಗಳ ಕಾಲ ಕರ್ನಾಟಕ ಬಂದ್ ಗೆ ಕಾಂಗ್ರೆಸ್ ಕರೆ ನೀಡಿತ್ತು.
ಶಾಲಾ-ಕಾಲೇಜು-ಸರ್ಕಾರಿ ಸೇವೆ- ಆರೋಗ್ಯ ಸೇವೆ ಹೊರತುಪಡಿಸಿ ಎಲ್ಲರ ಬೆಂಬಲವನ್ನು ಕೋರಿತ್ತು. ಆದ್ರೆ ಇದೀಗ ಬಂದ್ ದಿಡೀರನೇ ರದ್ದಾಗಿದೆ. ಈ ಸಂಬಂಧ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ನಾಳೆ ಪಿಯುಸಿ ಪರೀಕ್ಷೆ ಇರುವ ಹಿನ್ನೆಲೆ ಬಂದ್ ರದ್ದು ಮಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಶಾಲಾ ಮಕ್ಕಳಿಗೆ ತೊಂದರೆಯಾಗಬಾರದು ಎಂದು ಎಲ್ಲಾ ಸ್ಕ್ರೀನಿಂಗ್ ಕಮಿಟಿ ಸದಸ್ಯರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.
ಇಂದು ನಾಳೆಯ ಬಂದ್ ಬಗ್ಗೆ ಮಾತನಾಡುವುದಕ್ಕೆ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದರು. ಆದ್ರೆ ಈ ವೇಳೆ ನಾಳೆ ಕರ್ನಾಟಕ ಬಂದ್ ಮಾಡುತ್ತಿಲ್ಲವೆಂದು ತಿಳಿಸಿದ್ದಾರೆ.