ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.06 : ರಾಜ್ಯ ಸಚಿವ ಸಂಪುಟದಲ್ಲಿ ಪಿ.ಟಿ.ಸಿ.ಎಲ್. ಕಾಯಿದೆ ತಿದ್ದುಪಡಿ ಮಾಡಿ ಎಂಟು ತಿಂಗಳಾದರೂ ಅಧಿಕಾರಿಗಳು ತೀರ್ಪು ನೀಡದೆ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ವಾದ-ಪ್ರತಿವಾದಗಳು ಮುಗಿದಿದ್ದರೂ ಸಹಾ ನ್ಯಾಯಾಲಯಗಳಲ್ಲಿ ಆದೇಶವನ್ನು ನೀಡದೆ ಪ್ರಕರಣಗಳು ಬಾಕಿಯಿರುವುದರಿಂದ ತಮ್ಮ ಹಂತದಲ್ಲಿಯೇ ಪರಿಶೀಲಿಸಿ ತುರ್ತಾಗಿ ತೀರ್ಪು ನೀಡಬೇಕೆಂದು ಜಿಲ್ಲಾಧಿಕಾರಿಯವರಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯವರು ವಿನಂತಿಸಿದರು.
ಜಿಲ್ಲೆಯ ಮೂಲ ವಾರಸುದಾರರು ಆದೇಶ ಪಡೆದುಕೊಂಡು ಕೆಲವು ಪ್ರಕರಣಗಳು ಅಂತಿಮವಾಗಿದ್ದರೂ ಸ್ವಾಧೀನಕ್ಕೆ ಕೆಲವು ಕ್ರಯದಾರರು ಅಡಚಣೆಯುಂಟು ಮಾಡುತ್ತಿದ್ದಾರೆ.
ಭೂಮಂಜೂರಾತಿಯ ವಿದ್ಯಮಾನಗಳನ್ನು ಸರಿಯಾಗಿ ಅಥ್ರ್ಯೆಸಿಕೊಳ್ಳದಿರುವುದೆ ಇದಕ್ಕೆ ಕಾರಣ. ಎರಡು ತಿಂಗಳ ಹಿಂದೆ ಚಳ್ಳಕೆರೆ ಟೌನ್ ಕಸಬಾ ಹೋಬಳಿಯಲ್ಲಿ ಪಿ.ಟಿ.ಸಿ.ಎಲ್. ಕಾಯ್ದೆ ಉಲ್ಲಂಘಿಸಿ ಉಪವಿಭಾಗಾಧಿಕಾರಿಗಳು ಕ್ರಯದಾರರ ಪರವಾಗಿ ಆದೇಶಿಸಿದ್ದಾರೆ. ಪಿ.ಟಿ.ಸಿ.ಎಲ್. ಕಾಯ್ದೆ ಪ್ರಕಾರ ಮೂಲ ಮಂಜೂರುದಾರರಿಗೆ ಕಾನೂನು ರೀತಿಯ ತೀರ್ಪು ನೀಡಬೇಕು. ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಎಲ್ಲಾ ಪಿ.ಟಿ.ಸಿ.ಎಲ್. ಕೇಸುಗಳನ್ನು ಸ್ವಯಂ ದಾಖಲಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಕಾಯ್ದೆ ಬಗ್ಗೆ ಅರಿವು ಮೂಡಿಸಿ ತ್ವರಿತವಾಗಿ ನ್ಯಾಯ ಒದಗಿಸುವಂತೆ ಪ್ರತಿಭಟನಾನಿರತರು ಜಿಲ್ಲಾಧಿಕಾರಿಯವರನ್ನು ಕೋರಿದರು.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷ ಡಾ.ಆರ್.ಕೋದಂಡರಾಮ್, ಜಿಲ್ಲಾಧ್ಯಕ್ಷ ರಾಮಚಂದ್ರ ಕೆ. ಗೌರವಾಧ್ಯಕ್ಷ ಪಿ.ಎಂ.ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷ ಮೊಹಮದ್ ರಫಿ, ರಾಘವೇಂದ್ರ ಆರ್. ವಿನೋದ್‍ಕುಮಾರ್, ಸಾಧಿಕ್ ಚನ್ನಗಿರಿ, ಕಣುಮೇಶ್, ದಾದಾಪೀರ್ ಎಸ್. ದುರ್ಗೇಶ್, ಕುಮಾರ್, ರಘು, ಮಹಾಲಿಂಗಪ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.