ಬೆಂಗಳೂರು: ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಇಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕಲಬುರ್ಗಿ ಜಿಲ್ಲೆಯ ಚೌಕ್ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಿಜೆಪಿ ನಾಯಕಿ ನಡೆಸುತ್ತಿದ್ದ ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಈಗಾಗಲೇ ಕೇಸ್ ಲ್ಲಿ ಚಾರ್ಜ್ ಶೀಟ್ ಸಹ ಸಲ್ಲಿಕೆ ಆಗಿದೆ. ಅಕ್ರಮ ನಡೆದಿದ್ದು ಹೇಗೆ..? ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಉಲ್ಲೇಖ ಆಗಿದೆ.
ಪ್ರಾಂಶುಪಾಲರೇ ಇದರಲ್ಲಿ ಮೊದಲ ಆರೋಪಿ. ಬಿಜೆಪಿ ನಾಯಕಿ ದಿವ್ಯಾ ಸಹ ಪರೀಕ್ಷೆ ಸಂದರ್ಭದಲ್ಲಿ ಇದ್ರು. ನಾನೇ ಪ್ರಿನ್ಸಿಪಲ್ ಅಂತ ನಂಬಿಸಿ ಪರೀಕ್ಷೆ ನಡೆದ ಕಾಲೇಜು ಬಳಿ ಇದ್ರು. ಬ್ರೋಕರ್ಸ್ಗೆ ಸಹಕಾರ ಕೊಡಲು ಇವರು ಮ್ಯಾನೇಜ್ಮೆಂಟ್ ಇಂದ ಪ್ರಿನ್ಸಿಪಲ್ ಹುದ್ದೆಗೆ ಬರ್ತಾರೆ. ಪ್ರಿನ್ಸಿಪಲ್ ಕೊಟ್ಟಿರುವ ಹೇಳಿಕೆಯಲ್ಲಿ ಇದು ದಾಖಲಾಗಿದೆ. ನೂರಕ್ಕೆ ನೂರು ಪ್ರಶ್ನೆಗಳಿಗೆ ಉತ್ತರಿದೆ ಅಂತ ಟಿಕ್ ಮಾಡಿದ್ದಾರೆ.
ಅವರು ಬರೆದ ಉತ್ತರ ಪತ್ರಿಕೆಯ ಪ್ರತಿ ಫೋಟೋ ಕಾಪಿ ಕಳಿಸಿದ್ದಾರೆ. ಹೊರಗಡೆ ಬಂದ ಬಳಿಕ ದಿವ್ಯ ಹಾಗರಗಿ ಪ್ರಶ್ನೆ ಪತ್ರಿಕೆ ತುಂಬುವುದು. ಇದಕ್ಕೆ ಸಹಕಾರ ಕೊಟ್ಟ ಇನ್ವಿಜಿಲೇಟರ್ ಗೆ 4000 ರೂಪಾಯಿ ಕೊಟ್ಟಿದ್ದಾರೆ. ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವರೇ ಇದೇನು..? ರಾಜಕಾರಣಿಗಳ ಸಪೋರ್ಟ್, ಅಧಿಕಾರಿಗಳ ಸಪೋರ್ಟ್ ಇಲ್ಲದೇ ಇದು ಸಾಧ್ಯವೇ…?. ಸಂಬಂಧಿಕರಿಗೆ ರಿಯಾಯಿತಿ ಕೊಟ್ಟಿದ್ದಾರೆ. ನೀನು ಬೇರೆ ಅಭ್ಯರ್ಥಿ ಕಳಿಸಿಕೊಟ್ರೆ ಅವರ ಬಳಿ ಹೆಚ್ಚು ತೆಗೆದುಕೊಳ್ಳುತ್ತೇನೆಂದು ಪಾಟೀಲ್ ಹೇಳಿಕೆ ನೀಡಿದ್ದಾರೆ.
ಒಂದು ಸೆಂಟರ್ ಲ್ಲಿ ಮೂರು ಕೋಟಿ ವ್ಯವಹಾರ ನಡೆದಿದೆ. ಬೇರೆ ಕೇಂದ್ರಗಳ ಮಾಹಿತಿ ಯಾಕೆ ಕೊಡ್ತಿಲ್ಲ. ವಿಧಾನಸೌಧದಲ್ಲಿ ವ್ಯಾಪಾರ ಸೌಧ ಆಗಿದೆ ಅನ್ನೋದು ಗೊತ್ತಾಗುತ್ತೆ ಅಂತ ಇಲ್ಲಿಯವರೆಗೂ ಬರಲು ಬಿಡ್ತಿಲ್ಲ. ಕಲ್ಬುರ್ಗಿಯಲ್ಲಿಯೇ ಕೇಸ್ ಮುಗಿಸುವ ಕೆಲಸವಾಗ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲ ನೇಮಕಾತಿ ಬಗ್ಗೆ ತನಿಖೆ ಆಗಬೇಕು. ಎಲ್ಲ ತನಿಖೆ ಆದ್ರೆ ಅಕ್ರಮ ಮತ್ತಷ್ಟು ಹೊರಗಡೆ ಬರುತ್ತೆ.
ಯತ್ನಾಳ್ ಆರ್ಎಸ್ಎಸ್ ಮತ್ತು ಬಿಜೆಪಿ ಕಟ್ಟಾಲು. ಮಾಜಿ ಮುಖ್ಯಮಂತ್ರಿ ಮಗ ಇದರಲ್ಲಿ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ನಾನು ಮಾತನಾಡಿದ್ರೆ ನನ್ನನ್ನ ಹೇಳಿಕೆ ಕೊಡಿ ಎಂದು ಕರೆದಿದ್ರಿ. ಯತ್ನಾಳ್ ಅವರನ್ನ ಯಾವಾಗ ಕರೆಯುತ್ತಿರಿ..? ಯಾವಾಗ ಹೇಳಿಕೆ ದಾಖಲು ಮಾಡಿಕೊಳ್ಳುತ್ತಿರಿ ಎಂದು ಆರಗ ಜ್ಞಾನೇಂದ್ರ, ಕಟೀಲ್ ಗೆ ಪ್ರಿಯಾಂಕಾ ಖರ್ಗೆ ಪ್ರಶ್ನಿಸಿದ್ದಾರೆ.
ತನಿಖೆ ಎಷ್ಟು ದಿನದಲ್ಲಿ ಪೂರ್ಣ ಮಾಡ್ತೀರಾ. ರಾಜ್ಯಾದ್ಯಂತ ಆಗಿರುವ ಅಕ್ರಮ ಯಾಕೆ ತನಿಖೆ ಮಾಡ್ತಿಲ್ಲ. ಎಫ್ಐಆರ್ ದಾಖಲು ಆಗಿರುವ ಕೆಲ ಆರೋಪಿಗಳ ವಿರುದ್ಧ ತನಿಖೆ ಮತ್ತು ವಿಚಾರಣೆಗೆ ಯಾಕೆ ಅನುಮತಿ ಕೊಡ್ತಿಲ್ಲ. ನ್ಯಾಯಾಂಗ ತನಿಖೆಗೆ ಯಾಕೆ ಕೊಡ್ತಿಲ್ಲ. ನಾವು ಭಾಗಿಯಾಗಿದ್ರೆ ಯಾಕೆ ತಡ ಮಾಡ್ತೀರಾ. ಕೊಡಿ ನ್ಯಾಯಾಂಗ ತನಿಖೆಗೆ. ಅಮೃತ್ ಪೌಲ್ ಹೇಳಿಕೆಗೆ ಯಾಕೆ ಹೆದರಿಕೊಳ್ಳುತ್ತಿದ್ದೀರಿ. ಅವರು ಇಟ್ಟಿರುವ ಬೇಡಿಕೆ ಏನು..ನನ್ನನ್ನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಕೊಡಲು ಅವಕಾಶ ಕೊಡಿ ಎಂದು ಕೇಳಿದ್ದಾರೆ. ಅವರು ಸರ್ವಿಸ್ ರೂಲ್ ಪ್ರಕಾರ ಕೇಳಿದ್ದಾರೆ. ಎಸ್ಡಿಎ, ಎಫ್ಡಿಎ, ಪಿಡಿಓ, ಜೆಇ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ.