ಪಿಎಸ್ಐ ಕಿಂಗ್ ಪಿನ್ ಗೆ ಜೈಲಿನಲ್ಲಿ ರಾಜಾತಿಥ್ಯ..? ವೈರಲ್ ಆದ ಫೋಟೋ ಹೇಳ್ತಿರುವುದೇನು..?

suddionenews
1 Min Read

ಬೆಂಗಳೂರು: ಪಿಎಸ್ಐ ಪರೀಕ್ಷೆ ಹಗರಣ ರಾಜ್ಯದೆಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ‌. ಇದರ ತನಿಖೆಯನ್ನು ಸಿಐಡಿ ವಹಿಸಿಕೊಂಡಿದೆ. ಈಗಾಗಲೇ ಈ ಹಗರಣದ ಕಿಂಗ್ ಪಿನ್ ಕೂಡ ಅರೆಸ್ಟ್ ಆಗಿದ್ದಾನೆ. ಆರ್ ಪಾಟೀಲ್ ನನ್ನು ಜೈಲಿನಲ್ಲಿರಿಸಲಾಗಿದೆ‌

ಇದೀಗ ಈತನ ಫೋಟೋವೊಂದು ವೈರಲ್ ಆಗಿದ್ರು, ಜೈಲಿನಲ್ಲಿ ರಾಜ ಆತಿಥ್ಯ ನೀಡಲಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಕಲಬುರಗಿಯ ಎಂ ಬಿ ನಗರ ಠಾಣೆಯ ಸೆಲ್ ನಲ್ಲಿ ಈತನನ್ನು ಇಡಲಾಗಿದೆ. ಜೈಲಿನಲ್ಲಿ ಈತನಿಗೆ ಚೇರ್ ವ್ಯವಸ್ಥೆ ಮಾಡಲಾಗಿದೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಈತನನ್ನು ಪಿಎಸ್ಐ ಪರೀಕ್ಷೆಯ ಹಗರಣದ ಕಿಂಗ್ ಪಿನ್ ಎನ್ನಲಾಗಿದೆ. ಆದರೆ ಜೈಲಿನಲ್ಲಿ ಸಾಮಾನ್ಯ ಜನತೆಗೆ ನೀಡುವ ಸೌಲಭ್ಯಗಳನ್ನು ಹೊರತುಪಡಿಸಿ, ಚೇರ್ ವ್ಯವಸ್ಥೆ ಮಾಡಲಾಗಿದೆಮ ಕಸ್ಟಡಿಯಲ್ಲಿಯೂ ಈತ ತನ್ನ ಪ್ರಭಾವ ಬಳಸುತ್ತಿದ್ದಾನಾ ಎಂಬ ಪ್ರಶ್ನೆಗಳು ಎದ್ದಿವೆ. ಈಗಾಗಲೇ ಕೆಲವು ಜೈಲಿನಲ್ಲಿ ಆರೋಪಿಗಳಿಗೆ ಎಲ್ಲಾ ಸೌಲಭ್ಯ ಸಿಗುವಂತೆ ನೋಡಿಕೊಳ್ಳುತ್ತಿರುವ ಸುದ್ದಿ ಆಗಾಗ ಕೇಳಿ ಬರುತ್ತಿರುತ್ತದೆ. ಇದೀಗ ಪಿಎಸ್ಐ ಪರೀಕ್ಷೆಯ ಕಿಂಗ್ ಪಿನ್ ಗೂ ಅದೇ ಸೌಲಭ್ಯ ಸಿಗುತ್ತಿದೆಯಾ ಎಂದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಎದ್ದಿವೆ.

Share This Article
Leave a Comment

Leave a Reply

Your email address will not be published. Required fields are marked *