psi ಹಗರಣದ ಆರೋಪಿ ರುದ್ರಗೌಡ ಆರೋಗ್ಯದಲ್ಲಿ ಏರುಪೇರು.. ಮತ್ಯಾರೆಲ್ಲಾ ಅರೆಸ್ಟ್ ಆಗಿದ್ದಾರೆ ಗೊತ್ತಾ..?

suddionenews
1 Min Read

ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಾಕಷ್ಟು ಅಪ್ಡೇಟ್ ಆಗುತ್ತಿದೆ. ಎರಡು ರಾಜಕೀಯ ಪಕ್ಷಗಳು ಈ ಬಗ್ಗೆ ಆರೋಪ ಪ್ರತ್ಯಾರೋಪದಲ್ಲಿ ಮುಳುಗಿದೆ. ಈ ಮಧ್ಯೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಒಬ್ಬೊಬ್ಬರನ್ನೆ ಅರೆಸ್ಟ್ ಮಾಡುತ್ತಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 17 ಜನರನ್ನು ಬಂಧಿಸಿದ್ದಾರೆ.

ಹಗರಣದ ಕಿಂಗ್ ಪಿನ್ ರುದ್ರಗೌಡ ಅವರನ್ನು ಈಗಾಗಲೇ ಅರೆಸ್ಟ್ ಮಾಡಿ, ತನಿಖೆ ನಡೆಸುತ್ತಿದ್ದಾರೆ. ಸಿಐಡಿ ವಿಚಾರಣೆ ವೇಳೆ ವಾಂತಿ ಮಾಡಿಕೊಂಡಿದ್ದಾರೆ. ರುದ್ರಗೌಡ ಆರೋಗ್ಯದಲ್ಲಿ ಏರುಪೇರಾಗಿದೆ. ಇನ್ನು ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಈಗಾಗಲೇ ಚಿಕಿತ್ಸೆ ನೀಡಲಾಗಿದೆ.

ಇನ್ನು ಈ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಕೆಲವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅದರಲ್ಲಿ ಶಹಬಾದ್ ನಗರಸಭೆಯಲ್ಲಿ ಎಸ್ಡಿಎ ಆಗಿರುವ ಜ್ಯೋತಿ ಪಾಟೀಲ್ ಅರೆಸ್ಟ್ ಆಗಿದ್ದಾಳೆ. ಎರಡು ತಿಂಗಳ ಹಿಂದೆಯಷ್ಟೇ ನಗರಸಭೆಗೆ ವರ್ಗಾವಣೆಯಾಗಿದ್ದಳು. ಈ ಹಗರಣದಲ್ಲಿ ಈಗ ಪೊಲೀಸರ ವಶದಲ್ಲಿದ್ದಾರೆ. ಸಿಐಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *