ಬೆಂಗಳೂರು: ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಹಗರಣದ ತನಿಖೆ ನಡೆಯುತ್ತಿದೆ. ಸಿಐಡಿ ಅಧಿಕಾರಿಗಳು ಈ ವಿಚಾರಣೆ ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ 240 ಮಂದಿ ಅಭ್ಯರ್ಥಿಗಳನ್ನು ತನಿಖೆ ನಡೆಸಿದ್ದಾರೆ. ಇನ್ನು ನಾಲ್ಚರು ಅಭ್ಯರ್ಥಿಗಳ ತನಿಖೆ ಬಾಕಿ ಇದೆ.
ಹಂತ ಹಂತವಾಗಿ 170 ಮಂದಿ ಅಭ್ಯರ್ಥಿಗಳ ಮೂಲ ಓಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ ಗಳನ್ನು ಎಫ್ಎಸ್ಎಸ್ ಗೆ ರವಾನೆ ಮಾಡಲಾಗಿದೆ. ತನಿಖೆಯನ್ನು ಚುರುಕುಗೊಳಿಸಿರುವ ಅಧಿಕಾರಿಗಳು ಮತ್ತಷ್ಟು ಜನರ ವಿಚಾರಣೆಗೆ ನೋಟೀಸ್ ನೀಡಿದ್ದಾರೆ.
ಇನ್ನು ಪಿಎಸ್ಐ ಅಕ್ರಮದ ಬಗ್ಗೆ ಮಾತನಾಡಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ಆದರೆ ವಿಚಾರಣೆಗೆ ಇನ್ನು ಹಾಜರಾಗಿಲ್ಲ. ಇನ್ನು ನಾಲ್ವರು ಅಭ್ಯರ್ಥಿಗಳಿಗೂ ನೋಟೀಸ್ ನೀಡಲಾಗಿದೆ. ಆ ನಾಲ್ವರು ವಿದ್ಯಾರ್ಥಿಗಳು ಕೂಡ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದು, ವಿಚಾರಣೆಗೆ ಬಾರದೆ ಇದ್ದಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.